Saturday, June 6, 2026
Homeಕರಾವಳಿಉಡುಪಿಉಡುಪಿ; ತಾನು ನೋಡಿಕೊಳ್ಳುತ್ತಿದ್ದ ವೃದ್ಧೆಯ ಸರ ಕದ್ದು ಸಿಕ್ಕಿ ಬಿದ್ದ ಹೋಮ್ ನರ್ಸ್

ಉಡುಪಿ; ತಾನು ನೋಡಿಕೊಳ್ಳುತ್ತಿದ್ದ ವೃದ್ಧೆಯ ಸರ ಕದ್ದು ಸಿಕ್ಕಿ ಬಿದ್ದ ಹೋಮ್ ನರ್ಸ್

- Advertisement -
- Advertisement -

ಉಡುಪಿ: ತಾನು ನೋಡಿಕೊಳ್ಳುತ್ತಿದ್ದ ವೃದ್ಧೆಯ ಲಕ್ಷಾಂತರ ರೂಪಾಯಿ ಮೌಲ್ಯದ ಸರ ಕದ್ದು ಹೋಮ್ ನರ್ಸ್ ಸಿಕ್ಕಿ ಬಿದ್ದ ಘಟನೆ ಉಡುಪಿಯ ಹಿರಿಯಡ್ಕದಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ರೇಖಾ ಹೆಬ್ಬಳ್ಳಿ ಬಂಧಿತ ಮಹಿಳೆ.
ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಚೆನ್ನಿಬೆಟ್ಟು ಮದಗ ನಿವಾಸಿ ವಯೋ ವೃದ್ಧೆ ಸರಸ್ವತಿ (98) ಎಂಬವರ ಆರೈಕೆಗೆ ಉಡುಪಿ ಉಷಾ ಮ್ಯಾರೇಜ್ ಬ್ಯುರೋ ಜಾಬ್ ಲಿಂಕ್ಸ್ ಏಜೆನ್ಸಿ ಮೂಲಕ ಹೋಂ ನರ್ಸ್ ಕೆಲಸಕ್ಕೆ ರೇಖಾ ಹೆಬ್ಬಾಳ್ಳಿಯನ್ನು  ನೇಮಿಸಿಕೊಳ್ಳಲಾಗಿತ್ತು. ಆದರೆ, ಕೆಲಸಕ್ಕೆ ನೇಮಿಸಿದಾಕೆ ಮನೆಯಲ್ಲಿ ವೃದ್ದೆಯೊಬ್ಬರೇ ಇದ್ದಂತಹ ಸಂದರ್ಭದಲ್ಲಿ ಸರಸ್ವತಿರವರ ಕುತ್ತಿಗೆಯಲ್ಲಿದ್ದ ಸುಮಾರು 1.45 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಹಿರಿಯಡ್ಕ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!