Saturday, June 6, 2026
Homeಚಿಕ್ಕಮಗಳೂರುಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಗೆ ಟಾಟಾ ಹೇಳಿ “ಕೈ”ಯಲ್ಲಿ ಕಮಲ ಹಿಡಿದ 300ಕ್ಕೂ ಹೆಚ್ಚು ಕಾರ್ಯಕರ್ತರು

ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಗೆ ಟಾಟಾ ಹೇಳಿ “ಕೈ”ಯಲ್ಲಿ ಕಮಲ ಹಿಡಿದ 300ಕ್ಕೂ ಹೆಚ್ಚು ಕಾರ್ಯಕರ್ತರು

- Advertisement -
- Advertisement -

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷ ತೊರೆದ 300 ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿ ಸೇರಿದ ಘಟನೆ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿದೆ.

ಇದರಿಂದ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡಗೆ ಸ್ವ-ಹೋಬಳಿಯಲ್ಲೇ ಶಾಕ್ ಕೊಟ್ಟಂತಾಗಿದೆ. ಶಾಸಕನ ವರ್ತನೆಯಿಂದ ಬೇಸತ್ತು 300ಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. 

ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಗ್ರಾಮದ ಕಾರ್ಯಕರ್ತರು, ಅವರೇ ಶಾಮಿಯಾನ ಹಾಕಿ, ಕಾರ್ಯಕ್ರಮ ಮಾಡಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ರಾಜೇಗೌಡರ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿ, ಮೀಸಲಾತಿ ಹೆಚ್ಚಿಸಿದ ಬಿಜೆಪಿಗೆ ಜಿಂದಾಬಾದ್ ಕೂಗಿ ಜೈಕಾರ ಹಾಕಿದ್ದಾರೆ.   ನೂತನ ಕಾರ್ಯಕರ್ತರನ್ನು ಬಿಜೆಪಿ ಮಾಜಿ ಸಚಿವ ಜೀವರಾಜ್ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

- Advertisement -

Latest News

error: Content is protected !!