Monday, June 8, 2026
Homeಕರಾವಳಿಪುತ್ತೂರು; ರೈಲಿನಿಂದ ಇಳಿಯುತ್ತಿದ್ದಾಗ ಆಯತಪ್ಪಿ ಬಿದ್ದು ಮಹಿಳೆಗೆ ಗಾಯ

ಪುತ್ತೂರು; ರೈಲಿನಿಂದ ಇಳಿಯುತ್ತಿದ್ದಾಗ ಆಯತಪ್ಪಿ ಬಿದ್ದು ಮಹಿಳೆಗೆ ಗಾಯ

- Advertisement -
- Advertisement -

ಪುತ್ತೂರು; ರೈಲಿನಿಂದ ಇಳಿಯುತ್ತಿದ್ದಾಗ ಆಯತಪ್ಪಿ ಬಿದ್ದು ಮಹಿಳೆ ಗಾಯಗೊಂಡ ಘಟನೆ ಪುತ್ತೂರು ರೈಲು ನಿಲ್ದಾಣದಲ್ಲಿ ನಡೆದಿದೆ. ಬೆದ್ರಾಳ ನಿವಾಸಿ ಕುಸುಮ (42ವ) ಎಂಬವರು ಗಾಯಗೊಂಡವರು.

ಕುಸುಮಾ ತಮ್ಮ ಪುತ್ರಿಯನ್ನು ಬೆಂಗಳೂರು ರೈಲಿಗೆ ಹತ್ತಿಸಲು ಪುತ್ತೂರು ರೈಲು ನಿಲ್ದಾಣದಕ್ಕೆ ಬಂದು ಪುತ್ರಿಯ ಲಗೇಜ್ ಗಳನ್ನು ರೈಲಿನ ಒಳಗಿಟ್ಟು ರೈಲಿನಿಂದ ಇಳಿಯುತ್ತಿದ್ದಂತೆ ರೈಲು ಸಂಚರಿಸಲಾರಂಭಿಸಿದಾಗ ಆಯ ತಪ್ಪಿ ಅವರು ಕೆಳಗೆ ಬಿದ್ದು ಕಾಲು ಮುರಿತಕ್ಕೊಳಗಾಗಿದ್ದಾರೆ.ಗಾಯಾಳುವನ್ನು  ಸ್ಥಳದಲ್ಲಿ ಇದ್ದವರು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.

- Advertisement -

Latest News

error: Content is protected !!