Saturday, June 6, 2026
Homeಕರಾವಳಿನನಗೆ ಬಾಲಿವುಡ್ ಮತ್ತು ತೆಲುಗು ಸಿನಿಮಾ ರಂಗದಿಂದ ಆಫರ್ ಬಂದಿದ್ದು ನಿಜ: ರಿಷಬ್‌ ಶೆಟ್ಟಿ

ನನಗೆ ಬಾಲಿವುಡ್ ಮತ್ತು ತೆಲುಗು ಸಿನಿಮಾ ರಂಗದಿಂದ ಆಫರ್ ಬಂದಿದ್ದು ನಿಜ: ರಿಷಬ್‌ ಶೆಟ್ಟಿ

- Advertisement -
- Advertisement -

ಕಾಂತಾರ ಸಿನಿಮಾದ ಯಶಸ್ಸಿನ ಜೊತೆಗೆ ರಿಷಬ್ ಶೆಟ್ಟಿ ಅದೃಷ್ಟವನ್ನೇ ಬದಲಾಯಿಸಿದೆ. ಕಾಂತಾರದಲ್ಲಿ ರಿಷಭ್ ಅಭಿನಯ ಕಂಡು ಅವಕಾಶಗಳ ಮಹಾಪೂರವೇ ಹರಿದು ಬರ್ತಿದೆ.  ನಾನಾ ಸಿನಿಮಾ ರಂಗದಿಂದ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಮೊನ್ನೆಯಷ್ಟೇ ತೆಲುಗಿನಲ್ಲಿ ಸಿನಿಮಾ ಮಾಡುವಂತೆ ಅಲ್ಲು ಅರ್ಜುನ್ ತಂದೆ ಕೇಳಿಕೊಂಡಿದ್ದರು. ಇದೀಗ ಬಾಲಿವುಡ್ ನಿಂದಲೂ ಅವಕಾಶ ಬಂದಿದೆ.

ಈ ಕುರಿತು ಮಾತನಾಡಿರುವ ರಿಷಬ್ ಶೆಟ್ಟಿ, ‘ನನಗೆ ಬಾಲಿವುಡ್ ಮತ್ತು ತೆಲುಗು ಸಿನಿಮಾ ರಂಗದಿಂದ ಆಫರ್ ಬಂದಿದ್ದು ನಿಜ. ಆದರೆ, ಸದ್ಯಕ್ಕೆ ನಾನು ಎಲ್ಲಿಯೂ ಹೋಗುತ್ತಿಲ್ಲ. ಕನ್ನಡದಲ್ಲೇ ಮಾಡುವುದಕ್ಕೆ ತುಂಬಾ ಕೆಲಸಗಳಿವೆ. ಹಾಗಾಗಿ ಇಲ್ಲಿಯೇ ಇದ್ದುಕೊಂಡು ಸಿನಿಮಾ ಮಾಡುತ್ತೇನೆ. ಆ ಸಿನಿಮಾವನ್ನೇ ವಿವಿಧ ಸಿನಿಮಾ ರಂಗದ ಪ್ರೇಕ್ಷಕರು ನೋಡಲಿ ಎನ್ನುವುದು ನನ್ನಾಸೆ ಅಂದಿದ್ದಾರೆ.

- Advertisement -

Latest News

error: Content is protected !!