Monday, June 8, 2026
Homeಕರಾವಳಿಬಂಟ್ವಾಳ: ಶಾಲೆಗೆಂದು ಹೋದ ಬಾಲಕಿ ನಾಪತ್ತೆ: ದೂರು ದಾಖಲು

ಬಂಟ್ವಾಳ: ಶಾಲೆಗೆಂದು ಹೋದ ಬಾಲಕಿ ನಾಪತ್ತೆ: ದೂರು ದಾಖಲು

- Advertisement -
- Advertisement -

ಬಂಟ್ವಾಳ: ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ಶಾಲಾ ಬಾಲಕಿಯೋರ್ವಳು ನಾಪತ್ತೆಯಾದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೃಥ್ವಿ (12) ನಾಪತ್ತೆಯಾದ ಬಾಲಕಿ. ಈಕೆ ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹುರುಡಿ ಗ್ರಾಮದ ನಿವಾಸಿ ಪುಟ್ಟರಾಜ್ ಎಂಬುವರ ಮಗಳು. ಕಲ್ಲಡ್ಕದ ಅಮ್ಮೂರಿನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ಳು.

ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ, ನಿನ್ನೆ ಶಾಲೆಗೆಂದು ಹೋದವಳು ಶಾಲೆಗೂ ಹೋಗದೇ, ಮನೆಗೂ ಬಾರದೇ ನಾಪತ್ತೆಯಾಗಿದ್ದಾಳೆ. ಗಾಬರಿಗೊಂಡ ಪೋಷಕರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!