Thursday, June 4, 2026
Homeಕರಾವಳಿಉಡುಪಿಕುಂದಾಪುರ: ಹೃದಯಾಘಾತದಿಂದ ಮೃತಪಟ್ಟ 13 ವರ್ಷದ ಬಾಲಕಿ

ಕುಂದಾಪುರ: ಹೃದಯಾಘಾತದಿಂದ ಮೃತಪಟ್ಟ 13 ವರ್ಷದ ಬಾಲಕಿ

- Advertisement -
- Advertisement -

ಕುಂದಾಪುರ: 13 ವರ್ಷದ ಬಾಲಕಿಯೊಬ್ಬಳು ಮನೆಯಲ್ಲಿ ಓದುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ತಾಲೂಕಿನ ತಲ್ಲೂರಿನಲ್ಲಿ ನಡೆದಿದೆ.

ಕುಂದಾಪುರದಲ್ಲಿ ಅಕ್ಷರ ದಾಸೋಹ ಯೋಜನೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಹಾಗೂ ಹಕ್ಲಾಡಿ ಪ್ರೌಢಶಾಲೆಯ ಶಿಕ್ಷಕಿ ಭಾರತಿ ದಂಪತಿಯ ಪುತ್ರಿ ಅನುಶ್ರೀ ಮೃತಪಟ್ಟ ಬಾಲಕಿ. ಈಕೆ ಎಂಟನೇ ತರಗತಿ ಓದುತ್ತಿದ್ದಳು.ಅನುಶ್ರೀಯ ಕಣ್ಣುಗಳನ್ನು ದಾನ ಮಾಡಿದ್ದು ಪೋಷಕರು ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

- Advertisement -

Latest News

error: Content is protected !!