Thursday, June 4, 2026
Homeತಾಜಾ ಸುದ್ದಿಮಂಗಳೂರು: ಪ್ರತಿಭಾ ಕುಳಾಯಿ ಬಗ್ಗೆ ಮಾನಹಾನಿ ಪ್ರಕರಣ: 2ನೇ ಆರೋಪಿ ಕೆ.ಆರ್. ಶೆಟ್ಟಿ ಕೋರ್ಟ್‌ಗೆ ಹಾಜರು

ಮಂಗಳೂರು: ಪ್ರತಿಭಾ ಕುಳಾಯಿ ಬಗ್ಗೆ ಮಾನಹಾನಿ ಪ್ರಕರಣ: 2ನೇ ಆರೋಪಿ ಕೆ.ಆರ್. ಶೆಟ್ಟಿ ಕೋರ್ಟ್‌ಗೆ ಹಾಜರು

- Advertisement -
- Advertisement -

ಮಂಗಳೂರು : ಸುರತ್ಕಲ್‌ ಟೋಲ್‌ ತೆರವಿಗೆ ಆಗ್ರಹಿಸಿ ನಡೆದ ಹೋರಾಟದಲ್ಲಿ ಸಾಮಾಜಿಕ ಕಾರ್ಯಕರ್ತೆ ಹಾಗೂ ಕೆಪಿಸಿಸಿ ಸಂಯೋಜಕಿಯಾಗಿರುವ ಪ್ರತಿಭಾ ಕುಳಾಯಿ ಭಾಗಿಯಾಗಿದ್ದು ಇವರ ಕೆಲ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಟ್ರೋಲ್‌ ಆಗಿತ್ತು. ಈ ಬಗ್ಗೆ ಪ್ರತಿಭಾ ಕುಳಾಯಿ ಕೆಟ್ಟದಾಗಿ ಕಮೆಂಟ್‌ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ಮಾಡಿರುವ ಪ್ರಕರಣದ 2ನೇ ಆರೋಪಿ ಕೆ.ಆರ್. ಶೆಟ್ಟಿ ಎಂಬಾತ ಇಂದು ತನ್ನ ವಕೀಲರ ಮೂಲಕ ಕೋರ್ಟ್‌ಗೆ ಹಾಜರಾಗಿದ್ದಾನೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿದ್ದು, ನ್ಯಾಯಾಲಯದ ಆದೇಶಕ್ಕಾಗಿ ಎದುರು ನೋಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

- Advertisement -

Latest News

error: Content is protected !!