Saturday, June 6, 2026
Homeತಾಜಾ ಸುದ್ದಿಕಾಂತಾರ ಸಿನಿಮಾಗೆ ಸೂಪರ್‌ ಸ್ಟಾರ್‌ ರಜನೀಕಾಂತ್‌ ಮೆಚ್ಚುಗೆ: ರಿಷಭ್‌ಗೆ ಕಾಲ್‌ ಮಾಡಿ ಚಿತ್ರದ ಬಗ್ಗೆ ಪ್ರಶಂಸೆ

ಕಾಂತಾರ ಸಿನಿಮಾಗೆ ಸೂಪರ್‌ ಸ್ಟಾರ್‌ ರಜನೀಕಾಂತ್‌ ಮೆಚ್ಚುಗೆ: ರಿಷಭ್‌ಗೆ ಕಾಲ್‌ ಮಾಡಿ ಚಿತ್ರದ ಬಗ್ಗೆ ಪ್ರಶಂಸೆ

- Advertisement -
- Advertisement -

ದೇಶಾದ್ಯಂತ ಕಾಂತಾರ ಸಿನಿಮಾ ಗೆಲುವಿನ ಓಟವನ್ನು ಮುಂದುವರೆಸಿದೆ. ಹಾಗೇ ಸಿನಿಮಾ ರಂಗದ ಅನೇಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಂತೆಯೇ ಸೂಪರ್‌ ಸ್ಟಾರ್‌ ರಜನೀಕಾಂತ್‌ ಕಾಂತಾರ ಸಿನಿಮಾವನ್ನ ನೋಡಿ ಹಾಡಿ ಹೊಗಳಿದ್ದಾರೆ. ರಿಷಬ್‌ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಿಷಭ್‌‌ಗೆ ಕಾಲ್‌ ಮಾಡಿ ಸರ್‌ಪ್ರೈಸ್‌ ಕೊಟ್ಟಿದ್ದಾರೆ.

ರಜನಿಕಾಂತ್ ಕರೆ ಮಾಡಿದಾಗ ಥ್ರಿಲ್ ಆಗಿದ್ದ ರಿಷಬ್, ಮಾತಿನ ಮಧ್ಯೆ ರಜನಿ ಸ್ಟೈಲ್ ನಲ್ಲೇ ಸಿಗರೇಟು ತಿರುಗಿಸಿ ಬಾಯಿಗೆ ಹಾಕಿಕೊಂಡ ದೃಶ್ಯವನ್ನು ನೆನಪಿಸಿದ್ದಾರೆ. ಈ ದೃಶ್ಯ ಮಾಡುವಾಗ ನಿಮ್ಮನ್ನೇ ನೆನಪಿಸಿಕೊಂಡು, ನಿಮ್ಮದೇ ಸ್ಟೈಲ್ ನಲ್ಲೇ ಅದನ್ನು ಮಾಡಲು ಪ್ರಯತ್ನಿಸಿದ್ದೇನೆ ಎಂದು ರಿಷಬ್ ಹೇಳಿದ್ದಾರೆ. ಸಿನಿಮಾ, ಮೇಕಿಂಗ್, ಕಥೆ, ನಟನೆ, ಸಂಗೀತ ಸೇರಿದಂತೆ ಹಲವು ವಿಚಾರಗಳನ್ನು ರಜನಿ ಮುಕ್ತವಾಗಿ ರಿಷಬ್ ಜೊತೆ ಮಾತನಾಡಿದ್ದಾರೆ. ಎಲ್ಲಾ ವಿಭಾಗದ ಕೆಲಸವನ್ನೂ ರಜನಿ ಮೆಚ್ಚಿಕೊಂಡಿದ್ದಾರೆ.

- Advertisement -

Latest News

error: Content is protected !!