Friday, June 5, 2026
Homeಕರಾವಳಿ‘ಕಾಂತಾರ’ ಚಿತ್ರವನ್ನು ನೇರವಾಗಿ ಆಸ್ಕರ್‌ಗೆ ಕಳುಹಿಸಿ: ಕಂಗನಾ ರಣಾವತ್

‘ಕಾಂತಾರ’ ಚಿತ್ರವನ್ನು ನೇರವಾಗಿ ಆಸ್ಕರ್‌ಗೆ ಕಳುಹಿಸಿ: ಕಂಗನಾ ರಣಾವತ್

- Advertisement -
- Advertisement -

ಕಾಂತಾರ ಸಿನಿಮಾ ಆಸ್ಕರ್‌ಗೆ ಭಾರತದಿಂದ ನಾಮನಿರ್ದೇಶನಗೊಳ್ಳಬೇಕು ಅಂತ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ Kantara For Oscars ಅಂತ ಭಾರೀ ಅಭಿಯಾನ ಶುರು ಮಾಡಿದ್ದಾರೆ. ಈ ನಡುವೆ ಸಿನಿಮಾ ವೀಕ್ಷಿಸಿರುವ ಕಂಗನಾ ರಣಾವತ್, ಈ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಲ್ಲದೇ, ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಈ ಚಿತ್ರವನ್ನು ನೇರವಾಗಿ ಆಯ್ಕೆ ಮಾಡಿ ಎಂದು ಸರಕಾರದ ಗಮನ ಸೆಳೆದಿದ್ದಾರೆ. ಇಂತಹ ಚಿತ್ರಗಳೇ ಭಾರತದಿಂದ ಆಸ್ಕರ್ ಗಾಗಿ ಕಳುಹಿಸಬೇಕು. ಈ ಚಿತ್ರಕ್ಕೆ ಗೆಲ್ಲುವಂತಹ ಎಲ್ಲ ಅರ್ಹತೆಗಳೂ ಇವೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕುಟುಂಬ ಸಮೇತರಾಗಿ ನಾನು ಕಾಂತಾರ ಸಿನಿಮಾವನ್ನು ನೋಡಿದೆ. ಥಿಯೇಟರ್ ನಿಂದ ಆಚೆ ಬಂದ ಮೇಲೂ ಇನ್ನೂ ನಡುಗುತ್ತಲೇ ಇದ್ದೇನೆ. ಚಿತ್ರಕಥೆ, ಅದನ್ನು ತೋರಿಸಿದ ರೀತಿ, ರಿಷಬ್ ನಟನೆಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎಂದು ಕಂಗನಾ ಹೇಳಿದ್ದಾರೆ.

- Advertisement -

Latest News

error: Content is protected !!