Friday, June 5, 2026
Homeಕರಾವಳಿಪರೇಶ್‌ ಮೇಸ್ತಾ ಸಾಯುವ ಮುನ್ನ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗಿ: ಸಿಬಿಐ ವರದಿಯಲ್ಲಿ ಬಹಿರಂಗ

ಪರೇಶ್‌ ಮೇಸ್ತಾ ಸಾಯುವ ಮುನ್ನ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗಿ: ಸಿಬಿಐ ವರದಿಯಲ್ಲಿ ಬಹಿರಂಗ

- Advertisement -
- Advertisement -

ಕಾರವಾರ:ಪರೇಶ್ ಮೇಸ್ತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ.

ಪರೇಶ್‌ ಮೇಸ್ತಾ ಸಾವನ್ನಪ್ಪುವ ಮೊದಲು ಕುಮಟಾದಲ್ಲಿ ನಡೆದ ಆಗಿನ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೂ ಹೋಗಿ ಬಂದಿದ್ದ ವಿಚಾರ ಸಿಬಿಐ ತನಿಖೆಯಿಂದ ದೃಢಪಟ್ಟಿದೆ.

ಕುಮಟಾದಲ್ಲಿ ಡಿಸೆಂಬರ್‌ 6 ರಂದು ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಮೇಸ್ತಾ ಹೋಗಿದ್ದ. ಸುಮಾರು 25 ಕಿ.ಮೀ. ಪ್ರಯಾಣಿಸಿ ಸ್ನೇಹಿತರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಜೆ ಪರೇಶ್‌ ಮೇಸ್ತಾ ಮನೆಗೆ ಬಂದಿದ್ದ. ನಂತರ ಮನೆಯಿಂದ ಸ್ನೇಹಿತರನ್ನು ಭೇಟಿ ಮಾಡಲು ಹೋಗಿದ್ದ ಎಂಬ ವಿಚಾರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

- Advertisement -

Latest News

error: Content is protected !!