Friday, June 5, 2026
Homeಕರಾವಳಿಉಡುಪಿಕುಂದಾಪುರ: ಮರಳಿನಲ್ಲಿ ಮೂಡಿದ ಕಾಂತಾರ: ಆಕರ್ಷಣೀಯ ಕಲಾಕೃತಿ ರಚಿಸಿ ಅಭಿಮಾನ ತೋರಿದ ಕಲಾವಿದರು

ಕುಂದಾಪುರ: ಮರಳಿನಲ್ಲಿ ಮೂಡಿದ ಕಾಂತಾರ: ಆಕರ್ಷಣೀಯ ಕಲಾಕೃತಿ ರಚಿಸಿ ಅಭಿಮಾನ ತೋರಿದ ಕಲಾವಿದರು

- Advertisement -
- Advertisement -

ಕುಂದಾಪುರ: ಎಲ್ಲಿ ನೋಡಿದರೂ ಕಾಂತಾರದ್ದೇ ಮಾತು. ಜಗತ್ತಿನಾದ್ಯಂತ ಈ ಸಿನಿಮಾದ್ದೇ ಅಬ್ಬರ. ಜನ ರಿಷಬ್​ ಶೆಟ್ಟಿ ಅವರ ಜಪ ಮಾಡುತ್ತಿದ್ದಾರೆ. ಕ್ಲೈಮ್ಯಾಕ್ಸ್​ನಲ್ಲಿ ಇವರ ಅಭಿನಯ ಕಂಡು ದಂಗಾಗಿ ಹೋಗಿದ್ದಾರೆ. ಬಹಳಷ್ಟು ಜನ ಈ ಸಿನಿಮಾ ಬಗ್ಗೆ, ರಿಷಭ್‌ ನಟನೆ ಬಗ್ಗೆ ತಮ್ಮದೇ ಶೈಲಿಯಲ್ಲಿ ಅಭಿಮಾನ ತೋರಿಸ್ತಿದ್ದಾರೆ. ಅಂತೆಯೇ ಉಡುಪಿ ಸ್ಯಾಂಡ್ ಥೀಂ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಪ್ರಸಾದ್ ಆರ್. ಮರಳಿನ ಶಿಲ್ಪ ಕಲಾಕೃತಿಯ ಮೂಲಕ ಕಾಂತಾರ ಸಿನಿಮಾದ ಬಗ್ಗೆ ಅಭಿನಂದನೆ ತೋರಿಸಿ ಗಮನ ಸೆಳೆದಿದ್ದಾರೆ.

ಕುಂದಾಪುರದ ಕೋಟೇಶ್ವರ ಹಳೆ ಅಲಿವೆ ಕಡಲ ತೀರದಲ್ಲಿ ರಕ್ಷಕ ಶಕ್ತಿಯನ್ನು ಸಾರಿದ ವರಾಹರೂಪಿ ಪಂಜುರ್ಲಿ ಮತ್ತು ದೈವದರೂಪದಲ್ಲಿ ಅವತರಿಸಿದ ನಟ ರಿಷಬ್ ಶೆಟ್ಟಿಯವರನ್ನೇ ಕೇಂದ್ರವಾಗಿಸಿ, 4 ಅಡಿ ಮತ್ತು 7.5 ಅಡಿ ಎತ್ತರ ಅಗಲಗವುಳ್ಳ ಮರಳು ಕಲಾಕೃತಿಯನ್ನು ರಚಿಸಿ ಅಭಿಮಾನ ತೋರಿದ್ದಾರೆ.

- Advertisement -

Latest News

error: Content is protected !!