Thursday, June 4, 2026
Homeತಾಜಾ ಸುದ್ದಿಲವ್ ಜಿಹಾದ್ ಆರೋಪ ಹಿನ್ನೆಲೆಯಲ್ಲಿ ಆಕಾಶದೀಪ ಧಾರಾವಾಹಿ ಖ್ಯಾತಿಯ ದಿವ್ಯಾ ಶ್ರೀಧರ್ ಪತಿಯ ಬಂಧನ

ಲವ್ ಜಿಹಾದ್ ಆರೋಪ ಹಿನ್ನೆಲೆಯಲ್ಲಿ ಆಕಾಶದೀಪ ಧಾರಾವಾಹಿ ಖ್ಯಾತಿಯ ದಿವ್ಯಾ ಶ್ರೀಧರ್ ಪತಿಯ ಬಂಧನ

- Advertisement -
- Advertisement -

ಬೆಂಗಳೂರು: ಲವ್ ಜಿಹಾದ್ ಆರೋಪ ಹಿನ್ನೆಲೆಯಲ್ಲಿ ಆಕಾಶದೀಪ ಧಾರಾವಾಹಿ ಖ್ಯಾತಿಯ ದಿವ್ಯಾ ಶ್ರೀಧರ್ ಪತಿ ಅಮ್ಜಾದ್ ಖಾನ್ ರನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ತನಗೆ ಸುಳ್ಳು ಹೇಳಿ ಮದುವೆ ಆಗಿದ್ದಾನೆ, ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಹಾಗೂ ಲವ್ ಜಿಹಾದ್ ಆರೋಪವನ್ನೂ ಪತಿಯ ಮೇಲೆ ಹೊರೆಸಿ ದಿವ್ಯಾ ದೂರು ನೀಡಿದ್ದರು. ಈ ದೂರಿನಲ್ಲಿ ಪತಿಯು ತಮ್ಮ ಮೇಲೆ ಮಾಡಿದ ಹಲ್ಲೆಯಿಂದಾಗಿ ಗರ್ಭಪಾತದ ಭಯವೂ ಕಾಡುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದರು. ಈ ದೂರಿನ ಅನ್ವಯ ಅಮ್ಜಾದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನು ಇತ್ತೀಚೆಗೆ  ಆಸ್ಪತ್ರೆಯಿಂದ ಸೀದಾ ಪತಿ ಅಮ್ಜಾದ್ ಖಾನ್ ಮನೆಗೆ ಹೋಗಿರುವ ದಿವ್ಯಾ ಶ್ರೀಧರ್, ತನಗೆ ಈ ರೀತಿ ಯಾಕೆ ಮೋಸ ಮಾಡಿದೆ ಎಂದು ಗಲಾಟೆ ಮಾಡುತ್ತಿರುವ ವಿಡಿಯೋವನ್ನು ಅಮ್ಜಾದ್ ಖಾನ್ ವೈರಲ್ ಮಾಡಿದ್ದರು. ಅದರಲ್ಲೇ ಬೆನ್ನಲ್ಲೇ ಅವರ ಬಂಧನವಾಗಿದೆ.

- Advertisement -

Latest News

error: Content is protected !!