Saturday, October 17, 2026
Homeತಾಜಾ ಸುದ್ದಿಸಂಸದ ಬಿ.ವೈ ರಾಘವೇಂದ್ರ ಬ್ಯಾಂಕ್ ಖಾತೆಗೂ ಕನ್ನ ಹಾಕಿ ಬರೋಬ್ಬರಿ 16 ಲಕ್ಷ ದೋಚಿದ ಖದೀಮರು

ಸಂಸದ ಬಿ.ವೈ ರಾಘವೇಂದ್ರ ಬ್ಯಾಂಕ್ ಖಾತೆಗೂ ಕನ್ನ ಹಾಕಿ ಬರೋಬ್ಬರಿ 16 ಲಕ್ಷ ದೋಚಿದ ಖದೀಮರು

- Advertisement -
- Advertisement -

ಶಿವಮೊಗ್ಗ: ಸಂಸದ ಬಿ.ವೈ ರಾಘವೇಂದ್ರ ಅವರಿಗೂ ಹ್ಯಾಕರ್ಸ್ ಕಾಟ ತಪ್ಪಿಲ್ಲ. ಅವರ ಬ್ಯಾಂಕ್ ಖಾತೆಗೂ, ಆನ್ ಲೈನ್ ವಂಚಕರು ಕನ್ನ ಹಾಕಿದ್ದಾರೆ. ಮೂಲಕ ಬರೋಬ್ಬರಿ 16 ಲಕ್ಷ ಲಪಟಾಯಿಸಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗದ ಇಂಜಿನಿಯರಿಂಗ್ ಕಾಲೇಜಿಗೆ ಸಂಬಂಧಿಸಿದಂತೆ ಹೊಂದಿರುವಂತ ಖಾತೆಯಿಂದ 16 ಲಕ್ಷ ಹಣ ದಿಢೀರ್ ವರ್ಗಾವಣೆಗೊಂಡಿತ್ತು. ಹೀಗೆ ವರ್ಗಾವಣೆಗೊಂಡ ಹಣ ನಾನು ಮಾಡಿದ್ದಲ್ಲ. ಈ ಸಂಬಂಧ ಶಿವಮೊಗ್ಗ ಪೊಲೀಸರಿಗೆ ದೂರು ನೀಡಿದ್ದೇನೆ. ತನಿಖೆ ನಡೆಸಲಾಗುತ್ತಿದ್ದು, ಮುಂಬೈನಲ್ಲಿ ನನ್ನ ಬ್ಯಾಂಕ್ ಖಾತೆಗೆ ಕನ್ನ ಹಾಕಿದಂತ ಹ್ಯಾಕರ್ ಒಬ್ಬರನ್ನು ಪತ್ತೆ ಹಚ್ಚಿ, ಬಂಧಿಸಿದ್ದಾರೆ. ಇದೀಗ ನನ್ನ ಖಾತೆಯಿಂದ ಲಪಟಾಯಿಸಿದಂತ ಹಣ ವಾಪಾಸ್ ಬಂದಿದೆ ಎಂದು ಅವರು ಹೇಳಿದ್ದಾರೆ.

- Advertisement -

Latest News

error: Content is protected !!