Saturday, June 6, 2026
Homeಕರಾವಳಿಬೆಳ್ತಂಗಡಿಗೆ ಹೋಗಿ ಬರೋದಾಗಿ ಮನೆಯಿಂದ ಹೋದ ವ್ಯಕ್ತಿ ಕಾಣೆ: ನಾಪತ್ತೆ ಪ್ರಕರಣ ದಾಖಲು

ಬೆಳ್ತಂಗಡಿಗೆ ಹೋಗಿ ಬರೋದಾಗಿ ಮನೆಯಿಂದ ಹೋದ ವ್ಯಕ್ತಿ ಕಾಣೆ: ನಾಪತ್ತೆ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ : ವ್ಯಕ್ತಿಯೊಬ್ಬರು ಬೆಳ್ತಂಗಡಿಗೆ ಹೋಗಿ ಬರೋದಾಗಿ ಮನೆಯಿಂದ ಹೋಗಿ ವಾಪಾಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದಲ್ಲಿ ನಡೆದಿದೆ.  

ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಸಂಬೋಳ್ಯ ಮನೆಯ ನಿವಾಸಿ ಶೇಖರ ಶೆಟ್ಟಿಗಾರ (53) ಎಂಬವರು  ಸೆಪ್ಟಂಬರ್ 29 ರಂದು ಬೆಳಿಗ್ಗೆ 9 ಗಂಟೆಗೆ ಬೆಳ್ತಂಗಡಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವರು ಸಂಜೆಯದರೂ ಬಂದಿಲ್ಲ. ಸಂಬಂಧಿಕರು ಹಾಗೂ ನೆಗೆರಹೊರೆಯವರಲ್ಲಿ ವಿಚಾರಿಸಿದಾಗಲೂ ಅವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಈ ಮೊದಲು ಕೂಡಾ ಮನೆಯಿಂದ ಹೋದವರು 2-3 ದಿನಗಳ ನಂತರ ಮನೆಗೆ ಬರುತ್ತಿದ್ದರು,  ಅದೇ ರೀತಿಯಾಗಿ ಮನೆಗೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಕೊನೆಗೆ ಬಾರದೇ ಇದ್ದಾಗ ಅವರ ಮಗ ಮೋಹನ ಶೆಟ್ಟಿಗಾರ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಶೇಖರ್ ಶೆಟ್ಟಿಗಾರ್ ಅವರು  ಪತ್ತೆಯಾದರೆ ತಕ್ಷಣ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!