Saturday, June 13, 2026
Homeಕರಾವಳಿಮಂಗಳೂರು: ಮಹಿಳೆಯೊಬ್ಬರು ಕಳೆದುಕೊಂಡಿದ್ದ ಐಫೋನ್ ಮರಳಿಸಿ ಪ್ರಾಮಾಣಿಕತೆ ಮೆರೆದ ಕ್ಯಾಬ್ ಚಾಲಕ

ಮಂಗಳೂರು: ಮಹಿಳೆಯೊಬ್ಬರು ಕಳೆದುಕೊಂಡಿದ್ದ ಐಫೋನ್ ಮರಳಿಸಿ ಪ್ರಾಮಾಣಿಕತೆ ಮೆರೆದ ಕ್ಯಾಬ್ ಚಾಲಕ

- Advertisement -
- Advertisement -

ಮಂಗಳೂರು: ಮಹಿಳಾ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಐ-ಫೋನ್‌ ಅನ್ನು ಮರಳಿಸುವ ಮೂಲಕ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಕ್ಯಾಬ್‌ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಜಿನ್‌ಷಾ ಅವರು ವಿಮಾನನಿಲ್ದಾಣದಿಂದ ನಗರದಲ್ಲಿರುವ ವೈದ್ಯಕೀಯ ಕಾಲೇಜೊಂದರ ವಿದ್ಯಾರ್ಥಿನಿನಿಲಯಕ್ಕೆ ಶುಕ್ರವಾರ ರಾತ್ರಿ ಕ್ಯಾಬ್‌ನಲ್ಲಿ ಪ್ರಯಾಣಿಸಿದ್ದರು. ತಮ್ಮ ಐ-ಫೋನ್‌ ಅನ್ನು ಕ್ಯಾಬ್‌ನಲ್ಲಿ ಮರೆತು ಬಿಟ್ಟಿದ್ದರು.

ಕಾರು ಚಾಲಕ ಇಮ್ತಿಯಾಜ್‌ ಅವರು ವಿಮಾನನಿಲ್ದಾಣದ ವಾಹನ ನಿಲುಗಡೆ ತಾಣದಲ್ಲಿ ಶನಿವಾರ ತಮ್ಮ ಕಾರನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಅವರಿಗೆ ಐ-ಫೋನ್‌ ಸಿಕ್ಕಿತ್ತು. ಅದರ ಬ್ಯಾಟರಿ ಪೂರ್ತಿ ಖಾಲಿಯಾಗಿತ್ತು. ಮೊಬೈಲ್‌ ಪೋನ್‌ ಸಿಕ್ಕಿದ ಬಗ್ಗೆ ಇಮ್ತಿಯಾಜ್‌ ಅವರು ವಿಮಾನನಿಲ್ದಾಣದ ವಾಹನ ನಿಲುಗಡೆ ತಾಣದ ಸೂಪರ್‌ವೈಸರ್‌ಗೆ ಮಾಹಿತಿ ನೀಡಿದ್ದರು. ಅವರು ವಿಮಾನನಿಲ್ದಾಣದ ಭದ್ರತಾ ವಿಭಾಗದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ವಿಮಾನನಿಲ್ದಾಣದ ಟರ್ಮಿನಲ್‌ನ ವ್ಯವಸ್ಥಾಪಕರ ಕಚೇರಿಗೆ ಐಫೋನ್‌ ಅನ್ನು ತಲುಪಿಸಿದ್ದರು.

ತಾವು ಕಳೆದುಕೊಂಡ ಐಫೋನ್‌ ಕಾರು ಚಾಲಕನಿಗೆ ಸಿಕ್ಕಿದ್ದು, ಅದನ್ನು ಮರಳಿಸಿದ್ದಾರೆ ಎಂದು ವಿಮಾನನಿಲ್ದಾಣದಿಂದ ಜಿನ್‌ಷಾ ಅವರಿಗೆ ಸಂದೇಶ ರವಾನಿಸಲಾಗಿತ್ತು. ಅವರು ವಿಮಾನ ನಿಲ್ದಾಣಕ್ಕೆ ಬಂದು ಫೋನ್‌ ಅನ್ನು ಶನಿವಾರ ಪಡೆದುಕೊಂಡರು ಎನ್ನಲಾಗಿದೆ.

- Advertisement -

Latest News

error: Content is protected !!