Friday, June 5, 2026
Homeತಾಜಾ ಸುದ್ದಿರಾಜ್ಯದಲ್ಲಿ ಮತ್ತೆ ಅಘೋಷಿತ ಹೆಲ್ಸ್‌ ಎಮರ್ಜೆನ್ಸಿ ನಿರ್ಮಾಣವಾಗುವ ಆತಂಕ

ರಾಜ್ಯದಲ್ಲಿ ಮತ್ತೆ ಅಘೋಷಿತ ಹೆಲ್ಸ್‌ ಎಮರ್ಜೆನ್ಸಿ ನಿರ್ಮಾಣವಾಗುವ ಆತಂಕ

- Advertisement -
- Advertisement -

ಬೆಂಗಳೂರು: ದಸರಾ ಸಂಭ್ರಮದ ನಡುವೆಯೇ ಇದೀಗ ರಾಜ್ಯದಲ್ಲಿ ಮತ್ತೆ ಅಘೊಷಿತ ಹೆಲ್ಸ್‌ ಎಮರ್ಜೆನ್ಸಿ ನಿರ್ಮಾಣವಾಗುವ ಆತಂಕ ಶುರುವಾಗಿದೆ. ಸಂಬಳ ನೀಡದಿರುವ ವಿಚಾರದಲ್ಲಿ 108 ಆಂಬುಲೆನ್ಸ್‌ ಸಿಬ್ಬಂದಿ ಕೆರಳಿದ್ದಾರೆ. ಇಂದು ಮಧ್ಯಾಹ್ನದೊಳಗೆ ಸಂಬಳ ಪಾವತಿಸದಿದ್ದರೆ ಕೂಡಲೇ ಆಂಬುಲೆನ್ಸ್‌ ಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ದಸರಾ ದಿನವೇ ಜೀವರಕ್ಷಕ ಆಂಬುಲೆನ್ಸ್‌ ಸಿಬ್ಬಂದಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಸರ್ಕಾರದ ಬೊಕ್ಕಸದಿಂದ ಹಣ ಬಿಡುಗಡೆಯಾದರೂ ಜಿವಿಕೆ ಸಂಸ್ಥೆ ಸಿಬ್ಬಂದಿಗೆ ಸಂಬಳ ಪಾವತಿ ಮಾಡದೆ ಸತಾಯಿಸುತ್ತಿದೆ. ಆರೋಗ್ಯ ಕವಚ 108 ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಸಿಬ್ಬಂದಿ ಎರಡು ತಿಂಗಳಿಂದ ಸಂಬಳ ಇಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ.

- Advertisement -

Latest News

error: Content is protected !!