Monday, August 31, 2026
Homeತಾಜಾ ಸುದ್ದಿಮಣ್ಣಲ್ಲಿ ಮಣ್ಣಾದ ಚಿರು: ಧ್ರುವ ಸರ್ಜಾರ ಫಾರ್ಮ್ ಹೌಸ್​​ನಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ

ಮಣ್ಣಲ್ಲಿ ಮಣ್ಣಾದ ಚಿರು: ಧ್ರುವ ಸರ್ಜಾರ ಫಾರ್ಮ್ ಹೌಸ್​​ನಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ

- Advertisement -
- Advertisement -

ರಾಮನಗರ : ನಿನ್ನೆ ಹೃದಯಾಘಾತದಿಂದ ಮೃತಪಟ್ಟ ಸ್ಯಾಂಡಲ್​ವುಡ್ ನಟ, ಯುವ ಸಾಮ್ರಾಟ ಚಿರಂಜೀವಿ ಸರ್ಜಾ ಚಿರ ನಿದ್ರೆಗೆ ಜಾರಿದ್ದಾರೆ. ಅವರ ಅಂತ್ಯ ಕ್ರಿಯೆಯನ್ನ ಸಹೋದರ ಧ್ರುವ ಸರ್ಜಾರ ಫಾರ್ಮ್ ಹೌಸ್​​ನಲ್ಲಿ ನೆರವೇರಿಸಲಾಯ್ತು. ವಕ್ಕಲಿಗರ ಸಂಪ್ರದಾಯದಂತೆ ಕನಕಪುರ ರಸ್ತೆಯ ನೆಲಗೂಳಿಯಲ್ಲಿರುವ ಧ್ರುವ ಸರ್ಜಾರ ಬೃಂದಾವನ ಫಾರ್ಮ್​ ಹೌಸ್​​ನಲ್ಲಿ ಅಂತ್ಯಕ್ರಿಯೆ ನೆರವೇರಿದೆ.

ಅಂತ್ಯಕ್ರಿಯಲ್ಲಿ ಸರ್ಜಾ ಹಾಗೂ ಸುಂದರ್​ರಾಜ್ ಕುಟುಂಬಸ್ಥರು, ಅಪಾರ ಸ್ನೇಹಿತರು ಪಾಲ್ಗೊಂಡಿದ್ದರು. ಪತ್ನಿ ಮೇಘನಾ ರಾಜ್​ ಅಂತೂ ತೀವ್ರ ದುಃಖತಪ್ತರಾಗಿ ಕಣ್ಣೀರಿನ ವಿದಾಯ ಹೇಳಿದ್ರು. ಇನ್ನು ತಾಯಿಯಷ್ಟೇ ಅಣನನ್ನ ಹಚ್ಚಿಕೊಂಡಿರೋ ಧ್ರುವ ಸರ್ಜಾರ ನೋವಂತೂ ಹೇಳತೀರದಾಗಿದೆ.

ಸ್ಯಾಂಡಲ್ ವುಡ್ ಖ್ಯಾತ ನಟ ಚಿರಂಜೀವಿ ಸರ್ಜಾ ಅವರಿಗೆ ಕಳೆದ ನಿನ್ನೆ ಮಧ್ಯಾಹ್ನ ಹೃದಯಾಘಾತವಾಗಿತ್ತು. ಕೂಡಲೇ ಅವರ ಕುಟುಂಬಸ್ಥರು ಜಯನಗರದ ಅಪಲೋ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆ ಉಸಿರು ಎಳೆದಿದ್ದ ಅವರನ್ನು ವೈದ್ಯರು ಲೈಫ್ ಸೇವ್ ಚಿಕಿತ್ಸೆಯ ಮೂಲಕ ಬದುಕಿಸುವ ಪ್ರಯತ್ನ ಮಾಡಿದರು. ಆದ್ರೇ ಪ್ರಯತ್ನ ಫಲಕೊಡಲಿಲ್ಲ. ಅಂತಿಮವಾಗಿ ಸಂಜೆಯ ವೇಳೆಗೆ ನಟ ಚಿರಂಜೀವಿ ಸರ್ಜಾ(39) ನಿಧನರಾಗಿದ್ದಾಗಿ ಘೋಷಿಸಲಾಗಿತ್ತು.

- Advertisement -

Latest News

error: Content is protected !!