Friday, June 26, 2026
Homeಮನರಂಜನೆಮನೆಗೆ ಹೋಗಲು ಹಣ್ಣವಿಲ್ಲದೆ ಸಾರ್ವಜನಿಕರೆದುರು ಕಣ್ಣೀರಿಟ್ಟ ಹುಚ್ಚ ವೆಂಕಟ್.!

ಮನೆಗೆ ಹೋಗಲು ಹಣ್ಣವಿಲ್ಲದೆ ಸಾರ್ವಜನಿಕರೆದುರು ಕಣ್ಣೀರಿಟ್ಟ ಹುಚ್ಚ ವೆಂಕಟ್.!

- Advertisement -
- Advertisement -

ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿಯಾಗಿದ್ದ ನಟ ವೆಂಕಟ್ ತಮ್ಮ ಹುಚ್ಚಾಟಗಳಿಂದಲೇ ಫೇಮಸ್ ಆಗಿದ್ದರು. ಈ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಹಾಕಿಸಿಕೊಂಡ ವೆಂಕಟ್ ಆ ಬಳಿಕವೂ ತಮ್ಮ ಹುಚ್ಚಾಟವನ್ನು ಮುಂದುವರೆಸಿದ್ದರು.

ಇದೀಗ ಹುಚ್ಚ ವೆಂಕಟ್ ಬಹುಕಾಲದ ಬಳಿಕ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಶ್ರೀರಂಗಪಟ್ಟಣದ ಮೈದಾನದಲ್ಲಿ ರಾತ್ರಿ ಇಡೀ ಮಲಗಿದ್ದ ಅವರು ಬಳಿಕ ದೇವಾಲಯದ ಮುಂಭಾಗ ಕಾರು ನಿಲ್ಲಿಸಿ ಅಲೆದಾಟ ನಡೆಸಿದ್ದಾರೆ. ಅಲ್ಲದೆ ಒಂದಷ್ಟು ಕಾಲ ಪುಂಡಾಟ ನಡೆಸಿ ಬಳಿಕ ನಾನು ಊರಿಗೆ ಹೋಗಬೇಕು ಹತ್ತು ರೂಪಾಯಿ ಕೊಡಿ ಎಂದು ಅಂಗಲಾಚಿ ಸಾರ್ವಜನಿಕರ ಮುಂದೆ ಕಣ್ಣೀರಿಟ್ಟಿದ್ದಾರೆ. ಇವರ ಪರಿಸ್ಥಿತಿ ನೋಡಲಾರದೆ ಕೆಲವರು ಹಣ ನೀಡಿ ಕಳುಹಿಸಿಕೊಟ್ಟಿದ್ದಾರೆ.

ಈ ಹಿಂದೆ ಮಡಿಕೇರಿಯಲ್ಲಿ ತಮಗೆ ಸಹಾಯ ಮಾಡಿದ ವ್ಯಕ್ತಿಯೊಬ್ಬರ ಕಾರಿನ ಗ್ಲಾಸ್ ಹೊಡೆದು ಸಾರ್ವಜನಿಕರಿಂದ ಹೊಡೆತ ತಿಂದಿದ್ದ ಹುಚ್ಚ ವೆಂಕಟ್, ಚೆನ್ನೈನಲ್ಲಿ ಕಾಲಿಗೆ ಚಪ್ಪಲಿ ಇಲ್ಲದೆ ಅಲೆದಾಡುತ್ತಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

- Advertisement -

Latest News

error: Content is protected !!