Wednesday, June 3, 2026
Homeತಾಜಾ ಸುದ್ದಿಚಿರುಗೆ ಕಂಟಕವಾಯ್ತಾ ಜಾತಕದಲ್ಲಿದ್ದ ದೋಷ.. ಸಾವಿಗೆ ಇದುವೇ ಕಾರಣವಾಯಿತೇ?

ಚಿರುಗೆ ಕಂಟಕವಾಯ್ತಾ ಜಾತಕದಲ್ಲಿದ್ದ ದೋಷ.. ಸಾವಿಗೆ ಇದುವೇ ಕಾರಣವಾಯಿತೇ?

- Advertisement -
- Advertisement -

ಬೆಂಗಳೂರು: ಚಿರಂಜೀವಿ ಸರ್ಜಾ ಅಕಾಲಿಕವಾಗಿ ಸಾವನ್ನಪ್ಪಲು ಜಾತಕ ದೋಷವೇ ಕಾರಣವಾಯಿತೇ? ನವರಸನಾಯಕ ಜಗ್ಗೇಶ್ ಅವರ ಜಾತಕದಲ್ಲಿದ್ದ ದೋಷದ ಬಗ್ಗೆ ಹೇಳಿದ್ದಾರೆ.

ಹೌದು, ಚಿರು ಮೇಘನಾ ಪ್ರೀತಿಸುತ್ತಿದ್ದರೂ ಕೂಡ ಮನೆಯಲ್ಲಿ ಹೇಳೋದಕ್ಕೆ ಭಯ, ಅಂಜಿಕೆ. ಇದೇ ಕಾರಣಕ್ಕೆ ಚಿರಂಜೀವಿ ಸರ್ಜಾ ಜಗ್ಗೇಶ್ ಅವರಿಗೆ ಕರೆ ಮಾಡಿ ತನ್ನ ಹಾಗೂ ಮೇಘನಾ ಪ್ರೇಮ ವಿಚಾರವನ್ನ ತಿಳಿಸಿದ್ದರು. ಮದುವೆಯ ಮಾತುಕತೆ ನಡೆಸುವುದಕ್ಕೆ ಸಹಕಾರ ನೀಡುವಂತೆಯೂ ಕೇಳಿಕೊಂಡಿದ್ರು.

ಆದ್ರೆ ಜಗ್ಗೇಶ್ ಅವರು ಮರು ಮಾತನಾಡದೆ, ಮದುವೆ ಮಾತುಕತೆಯನ್ನಾಡೋದಕ್ಕೆ ಒಪ್ಪಿಗೆ ಸೂಚಿಸಿದ್ದರು. ಚಿರಂಜೀವಿ ಸರ್ಜಾ ಅತ್ಯಂತ ಸೂಕ್ಮ ಭಾವ ಜೀವಿ. ಯಾರೊಂದಿಗೂ ದ್ವೇಷ ಕಟ್ಟಿಕೊಂಡವರೇ ಅಲ್ಲಾ, ತಾನೊಬ್ಬ ಸಿನಿಮಾ ನಟ ಅನ್ನುವ ಹಮ್ಮು ಚಿರುಗೆ ಇರಲೇ ಇಲ್ಲಾ. ಚಿರುವಿನ ಒಳ್ಳೇಯತನದಿಂದಲೇ ಜಗ್ಗೇಶ್ ಮೇಘನಾ ತಂದೆ ತಾಯಿಯಲ್ಲಿ ಮಾತನಾಡಿ ಮದುವೆಗೆ ಒಪ್ಪಿಸಿದ್ದರು. 

ಚಿರು ಸರ್ಜಾ ಮದುವೆ ಸಂದರ್ಭದಲ್ಲಿ ಮೇಘನಾ ಮತ್ತು ಚಿರು ಜಾತಕವನ್ನು ತಮ್ಮ ಪರಿಚಯದ ಜ್ಯೋತಿಷಿಗಳ ಬಳಿ ತೋರಿಸಲು ಸುಂದರ್ ರಾಜ್ ದಂಪತಿಗಳ ಜತೆ ಜಗ್ಗೇಶ್ ಹೋಗಿದ್ದರಂತೆ. ಆ ಜ್ಯೋತಿಷಿಗಳು ಇವರ ಜಾತಕದಲ್ಲಿ ಅಷ್ಟಮ ಕುಜ ದೋಷವಿದೆ. ಅದಕ್ಕೆ ಕೆಲವು ಪೂಜೆ ಮುಖ್ಯ. ಅದನ್ನು ಮಾಡಿ ಮುಂದುವರಿಯಿರಿ ಎಂದಿದ್ದರಂತೆ.

ಆದರೆ ಈ ಪೂಜೆ ಅವರು ಮಾಡಿದ್ದಾರೋ ಇಲ್ಲವೋ ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದಿದ್ದಾರೆ ಜಗ್ಗೇಶ್. ಜ್ಯೋತಿಷ್ಯದಲ್ಲಿ ನಂಬಿಕೆಯುಳ್ಳವರು ಕುಜ ದೋಷವಿದ್ದರೆ ಪತಿ-ಪತ್ನಿ ಜತೆಯಾಗಿ ಬಾಳುವ ಯೋಗವಿಲ್ಲ ಎಂದು ನಂಬುತ್ತಾರೆ. ಹೀಗಾಗಿ ಈ ದೋಷವೇ ಚಿರು ಸಾವಿಗೆ ಕಾರಣವಾಯಿತೇ ಎಂದು ಅನುಮಾನ ಮೂಡಿದೆ.

- Advertisement -

Latest News

error: Content is protected !!