Saturday, June 13, 2026
Homeಕರಾವಳಿಉಡುಪಿಉಡುಪಿ: ಕಾಪುವಿನಲ್ಲಿ ಮೀನುಗಾರರ ಬಲೆಗೆ ಬಿದ್ದ ಭಾರೀ ಗಾತ್ರದ ನೂರಾರು ತೊರಕೆ ಮೀನುಗಳು

ಉಡುಪಿ: ಕಾಪುವಿನಲ್ಲಿ ಮೀನುಗಾರರ ಬಲೆಗೆ ಬಿದ್ದ ಭಾರೀ ಗಾತ್ರದ ನೂರಾರು ತೊರಕೆ ಮೀನುಗಳು

- Advertisement -
- Advertisement -

ಉಡುಪಿ: ಕಾಪು ಸಮೀಪದ ಮೂಳೂರು ಕಡಲ ತೀರದಲ್ಲಿ ಶನಿವಾರ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರ ಬಲೆಗೆ ನೂರಾರು ತೊರಕೆ ( ಸ್ಟಿಂಗ್ ರೇ) ಮೀನುಗಳು ಬಿದ್ದಿವೆ.

ಶುಕ್ರವಾರ ಹಾಗೂ ಶನಿವಾರ ಮೂಳೂರು ಕಡಲ ತೀರದಲ್ಲಿ ಏರ್ಮಾಳಿನ ಕೈರಂಪಣಿ ಮೀನುಗಾರಿಕೆ ಸಂದರ್ಭ ಬೃಹತ್ ಗಾತ್ರದ ತೊರಕೆ ಮೀನುಗಳು ಬಲೆಗೆ ಬಿದ್ದಿವೆ.

ತಲಾ 15 ರಿಂದ 50 ಕಿಲೋ ತೂಕದ ನೂರಾರು ತೊರಕೆ ಮೀನುಗಳು ಬಲೆಗೆ ಬಿದ್ದಿದ್ದು, ಈ ತೊರಕೆ ಮೀನುಗಳು ಕಿಲೋವೊಂದಕ್ಕೆ 250 ರೂ ನಿಂದ 300 ರೂ ಬೆಲೆ ಬಾಳುತ್ತದೆ.

ತೊರಕೆ ಎಂದು ಕರೆಯಲ್ಪಡುವ ಈ ಮೀನುಗಳನ್ನು ನೋಡಲೆಂದೇ ನೂರಾರು ಮಂದಿ ಕಡಲತೀರದತ್ತ ದೌಡಾಯಿಸಿದ್ದರು. ಬಲೆಗೆ ಬಿದ್ದ ಮೀನುಗಳನ್ನು ದೊಡ್ಡ ಬಡಿಗೆಯಲ್ಲಿ ಮೀನನ್ನು ಕಟ್ಟಿ ಹರಸಾಹಸದ ಮೂಲಕ ಮೇಲಕೆತ್ತಬೇಕಾಯಿತು.

- Advertisement -

Latest News

error: Content is protected !!