Thursday, March 27, 2025
Homeತಾಜಾ ಸುದ್ದಿನಮೀಬಿಯಾದಿಂದ ಭಾರತಕ್ಕೆ ಬಂದ ಕೆಲವೇ ದಿನಗಳಲ್ಲಿ ‌ಸಿಹಿ‌ಸುದ್ದಿ ಕೊಟ್ಟ ಚೀತಾ..

ನಮೀಬಿಯಾದಿಂದ ಭಾರತಕ್ಕೆ ಬಂದ ಕೆಲವೇ ದಿನಗಳಲ್ಲಿ ‌ಸಿಹಿ‌ಸುದ್ದಿ ಕೊಟ್ಟ ಚೀತಾ..

spot_img
- Advertisement -
- Advertisement -

ಮಧ್ಯಪ್ರದೇಶ:  ಆಫ್ರಿಕಾದ ನಮೀಬಿಯಾದಿಂದ ಭಾರತಕ್ಕೆ ಮೊನ್ನೆಯಷ್ಟೇ  ತರಲಾಗಿದ್ದ 8 ಚೀತಾಗಳ ಪೈಕಿ ‘ಆಶಾ’ ಎಂಬ ಚೀತಾ ಸಿಹಿ ಸುದ್ದಿ ನೀಡಿದೆ.

ನಮೀಬಿಯಾದಿಂದ  8 ಚೀತಾಗಳನ್ನು ಮಧ್ಯಪ್ರದೇಶದ ಕುನೋ ಅರಣ್ಯಕ್ಕೆ ತಂದು ಬಿಡಲಾಗಿತ್ತು. ಇವುಗಳ ಪೈಕಿ ಆಶಾ ಎಂಬ ಚೀತಾ ಗರ್ಭಿಣಿಯಾಗಿರುವ ಲಕ್ಷಣಗಳು ಕಂಡುಬಂದಿವೆ. ಇದಕ್ಕಾಗಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗರ್ಭಧಾರಣೆ ಖಚಿತಪಟ್ಟು ಮರಿ ಜನಿಸಿದರೆ ಇದು ಅದರ ಮೊದಲ ಮರಿಯಾಗಲಿದೆ. ಈ ಚೀತಾವನ್ನು ಕಾಡಿನಲ್ಲಿ ಸೆರೆ ಹಿಡಿಯಲಾಗಿತ್ತು. ಹಾಗಾಗಿ ಅದು ನಮೀಬಿಯಾದಲ್ಲೇ ಗರ್ಭಿಣಿಯಾಗಿರಬಹುದು. ಅದು ಮರಿ ಹಾಕಿದ ಬಳಿಕ ಅವುಗಳಿಗೆ ಅಗತ್ಯವಾದ ಏಕಾಂತತೆಯನ್ನು ನಾವು ನೀಡಬೇಕಾಗುತ್ತದೆ’ ಎಂದು ಚೀತಾ ಕನ್ಸರ್ವೇಶನ್‌ ಫಂಡ್‌ (ಸಿಸಿಎಫ್‌)ನ ನಿರ್ದೇಶಕ ಲೌರಿ ಮಾರ್ಕರ್‌ ಹೇಳಿದ್ದಾರೆ. ಅರಣ್ಯ ಬಿಟ್ಟ ಬಳಿಕ ಚೀತಾ ತನ್ನ ಕಿನೋದಲ್ಲಿ ಮನೆಯನ್ನು ಗುರುತಿಸಿಕೊಂಡಿದ್ದು, ಆರಾಮವಾಗಿ ಓಡಾಡಿಕೊಂಡಿದೆ.

- Advertisement -
spot_img

Latest News

error: Content is protected !!