Saturday, May 4, 2024
Homeಕರಾವಳಿಶಾಸಕ ಹರೀಶ್ ಪೂಂಜರಿಂದ ಬೆಳ್ತಂಗಡಿಯಲ್ಲಿ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರ ವಿತರಣೆ; 4 ವರ್ಷಗಳಿಂದ...

ಶಾಸಕ ಹರೀಶ್ ಪೂಂಜರಿಂದ ಬೆಳ್ತಂಗಡಿಯಲ್ಲಿ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರ ವಿತರಣೆ; 4 ವರ್ಷಗಳಿಂದ 3 ಸಾವಿರ ಹಕ್ಕು ಪತ್ರ ವಿತರಣೆ

spot_img
- Advertisement -
- Advertisement -

ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ 4 ವರ್ಷಗಳ ಅವಧಿಯಲ್ಲಿ ಸುಮಾರು 3 ಸಾವಿರ ಹಕ್ಕುಪತ್ರಗಳನ್ನು ವಿತರಿಸುವ ಕಲಸ ಶಾಸಕನಾಗಿ ಬಂದ ನಂತರ ಮಾಡಿದ್ದೇನೆ ಎಂದು ಹೇಳಲು ಸಂತೋಷವಾಗುತ್ತಿದೆ. ನನ್ನ ಮುಖ್ಯ ಉದ್ದೇಶ ತಾಲೂಕಿನಲ್ಲಿ 94ಸಿ ಮತ್ತು 94ಸಿಸಿ ಹಕ್ಕುಪತ್ರಗಳನ್ನು ನಿರಂತರವಾಗಿ ವಿತರಿಸುವ ಮೂಲಕ ಉತ್ತಮ ವ್ಯವಸ್ಥೆಗಳನ್ನು ಜನರಿಗೆ ನೀಡುವುದಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಇನ್ನೂ ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಯ ಸಲುವಾಗಿ ಹಳ್ಳಿ ಹಳ್ಳಿಗಳನ್ನು ಸಂಪರ್ಕಿಸುವ ಸರ್ವ ಋತು ರಸ್ತೆ ಯೋಜನೆಯ ಕೆಲಸವು ಪೂರ್ಣ ಪ್ರಮಾಣದಲ್ಲಿ ಆಗುತ್ತಿದೆ. ಅದಲ್ಲದೇ ಕಿಂಡಿ ಅಣೆಕಟ್ಟುಗಳನ್ನು ರಚಿಸಿ ಭೂಮಿಯ ಅಂತರ್ಜಾಲ ಹೆಚ್ಚಿಸುವ ಕಾರ್ಯಗಳೂ ನಡೆಯುತ್ತಿದೆ. ತಾಲೂಕಿನ ವಿವಿಧ ಕಡೆಗಳಲ್ಲಿ ವಿದ್ಯುತ್‌ ವ್ಯವಸ್ಥೆಗೆ ಬೇಕಾಗಿ ಸುಮಾರು 440 ಟ್ರಾನ್ಸ್ ಫಾರ್ಮರ್ ಅನುಷ್ಠಾನ ಗೊಂಡಿದ್ದು, ತಾಲೂಕಿನ ಸಮಗ್ರವಾದ ಅಭಿವೃದ್ಧಿಯ ದೃಷ್ಟಿಯಲ್ಲಿ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ, ನಾವೂರು ಗ್ರಾ.ಪಂ. ಅಧ್ಯಕ್ಷ ಗಣೇಶ ಗೌಡ, ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷ ಯಶವಂತ್, ನಿದ್ರೆ ಗ್ರಾ.ಪಂ. ಅಧ್ಯಕ್ಷ ಪುವೀಣ್ ಹೆಬ್ಬಾರ್, ಕಲ್ಮಂಜ ಗ್ರಾ.ಪಂ. ಅಧ್ಯಕ್ಷ ಶ್ರೀಧರ್, ಶಿರ್ಲಾಲ್‌ ಗ್ರಾ.ಪಂ. ಅಧ್ಯಕ್ಷ ತಾರಾನಾಥ ಗೌಡ, ಮೀನಾಕ್ಷಿ ಶೆಟ್ಟಿ ಕಳಿಯ ಗ್ರಾ.ಪಂ. ಅಧ್ಯಕ್ಷ ಸುಭಾಷಿಣಿ ಜೆ.ಗೌಡ, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷ ಕ.ವಿ. ಪುಸಾದ್,ಮೇಲಂತಬೆಟ್ಟು ಗ್ರಾ.ಪಂ. ಅಧ್ಯಕ್ಷ ಹರಿಣಾಕ್ಷಿ,ಬಳಂಜ ಗ್ರಾ.ಪಂ. ಅಧ್ಯಕ್ಷ ಹೇಮಂತ್, ಬೆಳ್ತಂಗಡಿ ತಹಸೀಲ್ದಾ‌ ಮಹೇಶ್‌ ಜಿ. ಉಪತಹಸೀಲ್ದಾರ್ ದಯಾನಂದ ಹೆಗ್ಡೆ, 94ಸಿ ವಿಷಯ ನಿರ್ವಾಹಕ ಶಂಕರ್, ಗ್ರಾಮಕರಣಿಕರಾದ ಸತೀಶ್ ಪಿಂಟೋ, ಪರಮೇಶ್ ಟಿ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು 94ಸಿ ವಿಷಯ ನಿರ್ವಾಹಕಿ ಹೇಮಾ ಕೆ. ನಿರೂಪಿಸಿ, ವಂದಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಮೂರು ಹೋಬಳಿಯ ಅರ್ಹ ಫಲಾನುಭವಿಗಳಿಗೆ ಶಾಸಕ ಹರೀಶ್ ಪೂಂಜಾ ಅವರು 94ಸಿ, 94ಸಿಸಿ ಹಕ್ಕುಪತ್ರ ವಿತರಿಸಿದರು. ಬೆಳ್ತಂಗಡಿ ಹೋಬಳಿಯಲ್ಲಿ 4 ಮಂದಿಗೆ 94ಸಿಸಿ 22 ಮಂದಿಗೆ 94ಸಿ, ಕೊಕ್ಕಡ ಹೋಬಳಿಯ 40 ಮಂದಿಗೆ ಹಾಗೂವೇಣೂರು ಹೋಬಳಿಯ 44 ಮಂದಿಗೆ 94 ಸಿ ವಿತರಿಸಲಾಯಿತು.

- Advertisement -
spot_img

Latest News

error: Content is protected !!