Friday, June 5, 2026
Homeಕರಾವಳಿಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು 86 ಲಕ್ಷದ ಚಿನ್ನ ವಶ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು 86 ಲಕ್ಷದ ಚಿನ್ನ ವಶ

- Advertisement -
- Advertisement -

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಸೆಪ್ಟೆಂಬರ್ 25 ರಿಂದ 30ರವರೆಗೆ ವಿವಿಧ ಪ್ರಕರಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು (ಎಂಐಎ) 86 ಲಕ್ಷದ 9 ಸಾವಿರದ 730 ರೂ.ಮೌಲ್ಯದ 1,703 ಗ್ರಾಂ 24 ಕ್ಯಾರೆಟ್ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ದುಬೈ ಮತ್ತು ಮಸ್ಕತ್‌ನಿಂದ ಆಗಮಿಸಿದ್ದ ಕಾಸರಗೋಡು, ಭಟ್ಕಳ ಮತ್ತು ತಿರುವನಂತಪುರ ಮೂಲದ ಐವರು ಪುರುಷ ಪ್ರಯಾಣಿಕರಿಂದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಯಾಣಿಕರು ಧರಿಸಿರುವ ಒಳಉಡುಪುಗಳ ಒಳಗೆ ಘನ ಗಮ್‌ನೊಂದಿಗೆ ಬೆರೆಸಿದ ಪೇಸ್ಟ್ ಮತ್ತು ಪೌಡರ್ ರೂಪದಲ್ಲಿ ಮರೆಮಾಚಿ, ಗುದನಾಳದಲ್ಲಿ ಮತ್ತು ಮಿಕ್ಸರ್ ಗ್ರೈಂಡರ್ ಮೋಟರ್‌ನೊಳಗೆ ಬಣ್ಣ ಲೇಪಿತ ಸುರುಳಿಯ ರೂಪದಲ್ಲಿ ಚಿನ್ನವನ್ನು ವಿವಿಧ ವಿಧಾನಗಳ ಮೂಲಕ ಕಳ್ಳಸಾಗಣೆ ಮಾಡುತ್ತಿದ್ದರು.

- Advertisement -

Latest News

error: Content is protected !!