Tuesday, July 1, 2025
Homeಕರಾವಳಿಉಡುಪಿಉಡುಪಿ ಜಿಲ್ಲೆಯಲ್ಲಿ 24 ಗಂಟೆಯಲ್ಲಿ 84 ಮಿ.ಮೀ. ಮಳೆ ದಾಖಲು

ಉಡುಪಿ ಜಿಲ್ಲೆಯಲ್ಲಿ 24 ಗಂಟೆಯಲ್ಲಿ 84 ಮಿ.ಮೀ. ಮಳೆ ದಾಖಲು

spot_img
- Advertisement -
- Advertisement -

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸರಾಸರಿ 84 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಕಾರ್ಕಳ ತಾಲೂಕಿನಲ್ಲಿ 77 ಮಿ.ಮೀ., ಹೆಬ್ರಿ ತಾಲೂಕಿನಲ್ಲಿ 142 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 78 ಮಿ.ಮೀ.,
ಬೈಂದೂರು ತಾಲೂಕಿನಲ್ಲಿ 68 ಮಿ.ಮೀ., ಉಡುಪಿ ತಾಲೂಕಿನಲ್ಲಿ 59 ಮಿ.ಮೀ., ಬ್ರಹ್ಮಾವರ ತಾಲೂಕಿನಲ್ಲಿ 86 ಮಿ.ಮೀ., ಮತ್ತು
ಕಾಪು ತಾಲೂಕಿನಲ್ಲಿ 57 ಮಿ.ಮೀ. ಮಳೆ ದಾಖಲಾಗಿದೆ.

ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಅನ್ನು ಹವಾಮಾನ ಇಲಾಖೆ ವಿಸ್ತರಣೆ ಮಾಡಿದ್ದು,
ಇಂದು ಸರಾಸರಿ 100 ಮಿಲಿ ಮೀಟರ್ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

ಬ್ರಹ್ಮಾವರ ತಾಲೂಕಿನಲ್ಲಿ ಸೀತಾ ನದಿ ತುಂಬಿ ಹರಿಯುತ್ತಿದ್ದು, ಮಟಪಾಡಿ, ನೀಲಾವರ, ಹನೇಹಳ್ಳಿ ಪರಿಸರದಲ್ಲಿ ನೀರಿನ ಮಟ್ಟ ಹೆಚ್ಚಳಗೊಂಡಿದೆ.

ಮಟಪಾಡಿಯ ಭತ್ತದ ಗದ್ದೆಗಳಲ್ಲಿ ನೆರೆ ನೀರು ತುಂಬಿದ್ದು, ಬಾವಲಿ ಕುದ್ರು,‌ ನಂದನ ಕುದ್ರು, ರಾಮನ ಕುದ್ರು ಪ್ರದೇಶಗಳಲ್ಲಿ ತೆಂಗಿನ ತೋಟಕ್ಕೆ ನದಿ ನೀರು ನುಗ್ಗಿದೆ.

- Advertisement -
spot_img

Latest News

error: Content is protected !!