Tuesday, June 23, 2026
Homeಚಿಕ್ಕಮಗಳೂರುಚಿಕ್ಕಮಗಳೂರು: 80 ಗೋಣಿ ಕರಿಮೆಣಸು ಕದ್ದ ಮಹಿಳೆ ಅರೆಸ್ಟ್

ಚಿಕ್ಕಮಗಳೂರು: 80 ಗೋಣಿ ಕರಿಮೆಣಸು ಕದ್ದ ಮಹಿಳೆ ಅರೆಸ್ಟ್

- Advertisement -
- Advertisement -

ಚಿಕ್ಕಮಗಳೂರು:  80 ಗೋಣಿ ಕರಿಮೆಣಸು ಕದ್ದ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.

ಮೂಡಿಗೆರೆ ಪಟ್ಟಣದಲ್ಲಿ ನೀಲಂ ಸೇಠ್ (ಮಾರ್ವಾಡಿ) ಅವರ ಕಾಳುಮೆಣಸು ಗೋಡೌನ್‌ನಲ್ಲಿ ದೊಡ್ಡ ಮಟ್ಟದ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಗೋಡೌನ್‌ನಲ್ಲಿದ್ದ ಸುಮಾರು 80 ಮೂಟೆ (ಸುಮಾರು 1,800 ಕೆ.ಜಿ.) ಕಾಳುಮೆಣಸು ಅಜ್ಞಾತರು ಕಳವುಮಾಡಿರುವುದು ಪತ್ತೆಯಾಗಿದೆ.


ಖಚಿತ ಮಾಹಿತಿಯ ಮೇರೆಗೆ ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್ ಅವರ ನೇತೃತ್ವದಲ್ಲಿ ಸಬ್‌ಇನ್ಸ್‌ಪೆಕ್ಟರ್ ಶ್ರೀನಾಥ್ ರೆಡ್ಡಿ ಹಾಗೂ ಪೊಲೀಸರು ದಾಳಿ ನಡೆಸಿ, ಬಾಪುನಗರದ ಸಬೀನಾ ಎಂಬ ಮಹಿಳಾ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನೂ ಮೂವರು ಆರೋಪಿಗಳಾದ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಪರಾರಿಯಾಗಿದ್ದು, ಅವರ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ. ಐದು ಬಾಗಿಲುಗಳಿರುವ ಗೋಡೌನ್‌ಗೆ ಕಳ್ಳರು ಒಂದೇ ಬಾಗಿಲಿನ ಮೂಲಕ ನುಗ್ಗಿದ್ದಾರೆ ಎನ್ನಲಾಗಿದೆ.


ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಕಾರ್ಯಾಚರಣೆಯಲ್ಲಿ CPI ರಾಜಶೇಖರ್, SI ಶ್ರೀನಾಥ್ ರೆಡ್ಡಿ, ಶಶಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ವೈಭವ್, ಸಚಿನ್, ಮಹೇಂದ್ರ, ಮಲ್ಲಿಕಾರ್ಜುನ, ವಿನಯ್, ಮನು ಭಾಗವಹಿಸಿದ್ದರು.

- Advertisement -

Latest News

error: Content is protected !!