Wednesday, June 26, 2024
Homeಕರಾವಳಿಮೊಟ್ಟೆಯಿಂದ ಬಂತು 8 ಹೆಬ್ಬಾವು ಮರಿಗಳು

ಮೊಟ್ಟೆಯಿಂದ ಬಂತು 8 ಹೆಬ್ಬಾವು ಮರಿಗಳು

spot_img
- Advertisement -
- Advertisement -
ಮಂಗಳೂರು:- ನಗರದ ಡೊಂಗರಕೇರಿಯ ವೆಂಕಟರಮಣ ದೇವಸ್ಥಾನದ ಎದುರು ಕಟ್ಟಡ ಕೆಲಸ ನಿರ್ವಹಿಸುತ್ತಿದ್ದ ಸುವರ್ಣ ಎಂಬವವರಿಗೆ ‌ಕಟ್ಟಡದ ನಿರ್ಮಾಣ ‌ಹಂತದಲ್ಲಿ ಸಿಕ್ಕಿದ್ದ ಹೆಬ್ಬಾವು ಮೊಟ್ಟೆಯ ಕುರಿತು ಉರಗ ಪ್ರೇಮಿ ಅಜಯ್ ಗೆ ಮಾಹಿತಿಯನ್ನು ನೀಡಿದರು.

ಅಜಯ್ ಉರಗ ರಕ್ಷಕ ಸ್ನೇಕ್ ಕಿರಣ್ ಸಹಕಾರದಲ್ಲಿ ಕೃತಕ‌ ಕಾವು ಕೊಟ್ಟು ಬಳಿಕ‌ ಹೊರಬಂದ 8 ಹೆಬ್ಬಾವು ಮರಿಗಳನ್ನು
ಬಂಟ್ವಾಳ ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ್ ಮಾರ್ಗದರ್ಶನದಂತೆ ಅರಣ್ಯಕ್ಕೆ ಬಿಡಲಾಗಿದೆ.

ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಪ್ರೀತಮ್ ಎಸ್.‌ಪೂಜಾರಿ, ಅರಣ್ಯ ರಕ್ಷಕ ಶೋಬಿತ್ ರಾಜ್, ಅಜಯ್, ಉರಗ ರಕ್ಷಕ ಸ್ನೇಕ್ ಕಿರಣ್ ,ವಾಹನ ಚಾಲಕ ಜಯರಾಮ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!