Thursday, June 4, 2026
Homeತಾಜಾ ಸುದ್ದಿ71ನೇ ವಯಸ್ಸಿನ ತಂದೆಗೆ 2ನೇ ಮದುವೆ ಮಾಡಿಸಿದ ಮಗಳು: ಮದುವೆಗೆ ನೈಜಕಾರಣ ಏನು ಗೊತ್ತಾ ?

71ನೇ ವಯಸ್ಸಿನ ತಂದೆಗೆ 2ನೇ ಮದುವೆ ಮಾಡಿಸಿದ ಮಗಳು: ಮದುವೆಗೆ ನೈಜಕಾರಣ ಏನು ಗೊತ್ತಾ ?

- Advertisement -
- Advertisement -

ನವದೆಹಲಿ: ಪ್ರೀತಿಗೆ ವಯಸ್ಸು ಇಲ್ಲ. ಇದನ್ನೇ ಉದಾಹರಣೆ ಎಂಬಂತೆ, ಪತ್ನಿ ತೀರಿಕೊಂಡ ಐದು ವರ್ಷಗಳ ನಂತರ ಇತ್ತೀಚೆಗೆ ವಿಧವೆ ಮಹಿಳೆಯನ್ನು ಮದುವೆಯಾದ 71 ವರ್ಷದ ವ್ಯಕ್ತಿಯ ಕಥೆ ನೆಟ್ಟಿಗರ ಹೃದಯ ಗೆದ್ದಿದೆ.

ಎರಡು ದಿನಗಳ ಹಿಂದೆ ಉತ್ತರ ಭಾರತ ಮೂಲದ ಅದಿತಿ ಎಂಬ ಯುವತಿ ತನ್ನ ತಂದೆ ಮತ್ತು ತಂದೆ ಮರುಮದುವೆಯಾದ ಮಹಿಳೆಯ ಫೋಟೋ ಒಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಂದಿನಿಂದ, ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ.

71 ವಯಸ್ಸಿನ ಹಿರಿಯ ಜೀವಕ್ಕೆ ಆಸರೆಯಾಗಿದ್ದ ಪತ್ನಿ ತೀರಿ ಹೋಗಿ 5 ವರ್ಷಗಳು ಕಳೆದಿವೆ. ಒಂಟಿಯಾಗಿದ್ದ ಜೀವಕ್ಕೆ ಮಗಳೇ ಆಸೆರೆಯಾಗಿದ್ದಳು. ಆದರೆ, ಕೆಲಸದ ಹಿನ್ನೆಲೆಯಲ್ಲಿ ತಂದೆ ಆರೈಕೆ ಸಾದ್ಯವಾಗುತ್ತಿರಲಿಲ್ಲ. ಹೀಗಾಗಿ ತಂದೆಗೆ ಮರು ಮದುವೆ ಮಾಡಲು ಮಗಳು ಆದಿತಿ ನಿರ್ಧರಿಸಿದಳು. ಆರಂಭದಲ್ಲಿ ಮರು ಮದುವೆ ಬೇಡವೆನ್ನುತ್ತಿದ್ದ ತಂದೆ ಕೊನೆಯಲ್ಲಿ ಒಪ್ಪಿಕೊಂಡನು. ಕೊನೆಗೆ ವಿಧವೆಯೊಬ್ಬಳನು ಹುಡುಕಿ ತನ್ನ ತಂದೆಗೆ ಆದಿತಿ ಇದೇ ತಿಂಗಳ 27ರಂದು ಮಡುವೆ ಮಾಡಿದಳು.

ಇದರ ಬೆನ್ನಲ್ಲೇ ತಂದೆಯ ಮದುವೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿರುವ ಆದಿತಿ, ಮರು ಮದುವೆ ಕುರಿತು ನಮ್ಮ ದೇಶದಲ್ಲಿ ನಿರ್ಧಿಷ್ಟ ಕಾನೂನುಗಳಿಲ್ಲ. ನನ್ನ ತಂದೆಯೊಂದಿಗೆ ಕೆಲವು ಮಹಿಳೆಯರು ಮಲಗಿದ್ದನ್ನು ನಾನು ನೋಡಿದೆ. ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದರ ಬಗ್ಗೆ ತಿಳಿದಿದ್ದೆ. ಕೊನೆಗೂ ನನ್ನ ತಂದೆ ಮರು ಮದುವೆ ಆಗಿದ್ದಾರೆ. ಸಮಾಜ ಅವರನ್ನು ಆಶೀರ್ವದಿಸುತ್ತದೋ? ಇಲ್ಲವೋ? ಎಂದು ನನಗೆ ತಿಳಿದಿಲ್ಲ. ಆದರೆ ನನ್ನ ತಂದೆ ಒಂಟಿಯಾಗಿ ಇರುವುದು ನನಗೆ ಇಷ್ಟವಿಲ್ಲ ಎಂದು ಆದಿತಿ ಬರೆದುಕೊಂಡಿದ್ದಾಳೆ.

- Advertisement -

Latest News

error: Content is protected !!