ಲಾಕ್ ಡೌನ್ ನಡುವೆಯೂ ಯುವತಿ ಬರೋಬ್ಬರಿ 60 ಕಿಲೋಮೀಟರ್ ದೂರ ನಡೆದುಕೊಂಡು ಹೋಗಿ ಪ್ರಿಯಕರನನ್ನು ಸೇರಿಕೊಂಡಿದ್ದಾಳೆ. ಪ್ರೀತಿಗೆ ಮನೆಯಲ್ಲಿ ವಿರೋಧ ಮಾಡಿದ್ದರಿಂದ ಲಾಕ್ ಡೌನ್ ಲೆಕ್ಕಿಸದ ಆಂಧ್ರಪ್ರದೇಶದ ಯುವತಿ ನಡೆದೇ ಪ್ರಿಯಕರನ ಜೊತೆಯಾಗಿದ್ದಾರೆ. ಕೃಷ್ಣಾ ಜಿಲ್ಲೆಯ ಹನುಮಾನ್ ಜಂಕ್ಷನ್ ನಿವಾಸಿಯಾಗಿರುವ 19 ವರ್ಷದ ಚಿತ್ತಿಕಾಲ ಭವಾನಿ 4 ವರ್ಷಗಳಿಂದ ಸಾಯಿ ಪುನ್ನಯ್ಯನನ್ನು ಪ್ರೀತಿಸಿದ್ದಳು.
ಆಕೆ ಮನೆಯವರಿಗೆ ತಮ್ಮ ಪ್ರೀತಿಯ ವಿಷಯ ತಿಳಿಸಿದಾಗ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಿಯಕರನೊಂದಿಗೆ ಮೊಬೈಲ್ ನಲ್ಲಿ ತನ್ನ ಕಷ್ಟ ಹೇಳಿಕೊಂಡ ಭವಾನಿ ಲಾಕ್ ಡೌನ್ ಇದ್ದರೂ, 60 ಕಿಲೋಮೀಟರ್ ನಡೆದುಕೊಂಡು ಪ್ರಿಯಕರನನ್ನು ಸೇರಿಕೊಂಡಿದ್ದಾಳೆ. ಮನೆಯಲ್ಲಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಲಾಕ್ ಡೌನ್ ಇರುವಾಗಲೇ ಮದುವೆ
ಲಾಕ್ ಡೌನ್ ಹೊರತಾಗಿಯೂ ಮುಂಬಯಿನ 28 ವರ್ಷ ವಯಸ್ಸಿನ ವ್ಯಕ್ತಿ ಮೊದಲೇ ನಿಶ್ಚಯವಾದ ದಿನದಂದೇ ಮದುವೆಯಾಗಬೇಕು ಎಂದು ಗುರುವಾರ ಮದುವೆಯಾಗಿದ್ದಾರೆ. ಅವರ ಮದುವೆಗೆ ಬಂಧುಗಳು, ಸ್ನೇಹಿತರ ಅನು ಪಸ್ಥಿತಿಯಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ರಾಮ್‌ಕಿಶನ್ ಚವಾಣ್ ಮತ್ತು ರೀಮಾ ಸಿಂಗ್ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಲಾಕ್‌ಡೌನ್ ಇರುವುದರಿಂದ ಮದುವೆಯನ್ನು ಮುಂದೂಡಲಿಲ್ಲ. ಸ್ಥಳೀಯ ಆಡಳಿತದ ಅನುಮತಿ ತೆಗೆದುಕೊಂಡು ದೇವಸ್ಥಾನದಲ್ಲಿ ಮದುವೆಯಾದೆವು ಎಂದು ರಾಮ್ ಕಿಶನ್ ಹೇಳಿದ್ದಾರೆ.