Sunday, June 14, 2026
Homeತಾಜಾ ಸುದ್ದಿ6ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

6ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

- Advertisement -
- Advertisement -

ಹೈದರಾಬಾದ್: 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತಕ್ಕೆ ಬಲಿಯಾಗಿರುವ ಹೈದರಾಬಾದ್ ನ  ಮಹಬೂಬಾಬಾದ್ ಮಾರಿಪೇಡಾ ಮಂಡಲದಲ್ಲಿ ನಡೆದಿದೆ.

6ನೇ ತರಗತಿಯ ಬೋಡಾ ಶ್ರವಂತಿಗೆ ಗುರುವಾರ ರಾತ್ರಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಗುರುವಾರ ರಾತ್ರಿ ಮಲಗಿದ ಕೆಲವು ಗಂಟೆಗಳ ನಂತರ, 12.30 ರ ಸುಮಾರಿಗೆ ಬಾಲಕಿಗೆ ಎಚ್ಚರವಾಯಿತು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಅವಳು ತನಗೆ ಎದೆ ನೋಯುತ್ತಿರುವ ಬಗ್ಗೆ ಅಜ್ಜಿಗೆ ತಿಳಿಸಿದಳು. ಕುಟುಂಬದ ಸದಸ್ಯರು ಅವಳನ್ನು ವೈದ್ಯರ ಬಳಿಗೆ ಕರೆದೊಯ್ಯಲು ಆಟೋವನ್ನು ಕರೆತರುವ ವೇಳೆಗೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬಾಲಕಿ ಸಾವನ್ನಪ್ಪಿದಳು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಶ್ರೀರಾಮ ನವಮಿ ನಿಮಿತ್ತ ಶಾಲೆಗಳಿಗೆ ರಜೆ ಇದ್ದ ಕಾರಣ ಬಾಲಕಿ ತನ್ನ ಸ್ನೇಹಿತರೊಂದಿಗೆ ಆಟವಾಡಿ ಅಜ್ಜಿಯ ಮನೆಯಲ್ಲಿ ಮಲಗಿದ್ದಳು.ಮೃತ ಬಾಲಕಿ ಮಾರಿಪೇಡಾದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು.ಬಾಲಕಿಯ ಪೋಷಕರು ಕೃಷಿಕರಾಗಿದ್ದ, ಈಕೆ ಎರಡನೇ ಮಗಳು. ಇನ್ನೂ ಬಾಳಿ ಬದುಕಬೇಕಿದ್ದ ಮಗಳ ಸಾವಿನಿಂದ ಕುಟುಂಬದಲ್ಲಿ ಶೋಕ ಆವರಿಸಿದೆ.

- Advertisement -

Latest News

error: Content is protected !!