Thursday, June 25, 2026
Homeತಾಜಾ ಸುದ್ದಿನೀಟ್ ಪರೀಕ್ಷೆ ಬರೆದ 55 ವರ್ಷದ ವ್ಯಕ್ತಿ: ಇವರ ಛಲಕ್ಕೊಂದು ನಮ್ಮ ಹ್ಯಾಟ್ಯಾಫ್

ನೀಟ್ ಪರೀಕ್ಷೆ ಬರೆದ 55 ವರ್ಷದ ವ್ಯಕ್ತಿ: ಇವರ ಛಲಕ್ಕೊಂದು ನಮ್ಮ ಹ್ಯಾಟ್ಯಾಫ್

- Advertisement -
- Advertisement -

ಚೆನ್ನೈ:  ತಮಿಳುನಾಡಿನ ಮಧುರೈನಲ್ಲಿ 55ರ ಹರೆಯದ ರೈತರೊಬ್ಬರು ಅಖಿಲ ಭಾರತೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನೇ ಬರೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಕೆ.ರಾಜ್ಯಕ್ಕೋಡಿ 1984ರಲ್ಲಿ ನೀಟ್‌ ಬರೆದು, ಖಾಸಗಿ ವೈದ್ಯಕೀಯ ಕಾಲೇಜಿಗೆ ಆಯ್ಕೆಯಾಗಿದ್ದರಂತೆ. ಆದರೆ ಆಗ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಅವರಿಗೆ ಕಾಲೇಜು ಸೇರಲು ಆಗಿರಲಿಲ್ಲ. ಅದಾದ ನಂತರ ಕೃಷಿ ಕಾಯಕ ಮಾಡುತ್ತಾ ಜೀವನ ನಡೆಸಿದ ಅವರು ಕಳೆದ ವರ್ಷ ಒಡಿಶಾದಲ್ಲಿ 64 ವರ್ಷದ ವ್ಯಕ್ತಿಯೊಬ್ಬರು ನೀಟ್‌ ಬರೆದ ಸುದ್ದಿ ಕೇಳಿ ಸ್ಫೂರ್ತಿ ಪಡೆದುಕೊಂಡಿದ್ದಾರೆ.

ರಾಜ್ಯಕ್ಕೋಡಿ ಅವರ ಕಿರಿಯ ಮಗ ವಾಸುದೇವನ್‌ ನೀಟ್‌ನಲ್ಲಿ 521 ಅಂಕ ಪಡೆದು, ಕಡಲೂರಿನ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಗ ಅಭ್ಯಾಸ ಮಾಡಿದ್ದ ಪುಸ್ತಕಗಳನ್ನು ಇಟ್ಟುಕೊಂಡಿದ್ದ ರಾಜ್ಯಕ್ಕೋಡಿ ಕಳೆದ 1 ವರ್ಷದಿಂದ ದಿನಕ್ಕೆ 3 ತಾಸು ಅಭ್ಯಾಸ ಮಾಡಿದ್ದು, ಭಾನುವಾರ ಪರೀಕ್ಷೆ ಬರೆದಿದ್ದಾರೆ. ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಕ್ಕರೆ ವಿದ್ಯಾಭ್ಯಾಸ ಮಾಡುವುದಾಗಿಯೂ ಹೇಳಿದ್ದಾರೆ.

- Advertisement -

Latest News

error: Content is protected !!