Friday, June 5, 2026
Homeಕರಾವಳಿಕಾಸರಗೋಡು;ಇಬ್ಬರು ಮದ್ರಸಾ ವಿದ್ಯಾರ್ಥಿಗಳಿಗೆ ಅಧ್ಯಾಪಕನಿಂದ ಲೈಂಗಿಕ ಕಿರುಕುಳ ಪ್ರಕರಣ; ಆರೋಪಿಗೆ 53 ವರ್ಷ ಕಠಿಣ ಸಜೆ...

ಕಾಸರಗೋಡು;ಇಬ್ಬರು ಮದ್ರಸಾ ವಿದ್ಯಾರ್ಥಿಗಳಿಗೆ ಅಧ್ಯಾಪಕನಿಂದ ಲೈಂಗಿಕ ಕಿರುಕುಳ ಪ್ರಕರಣ; ಆರೋಪಿಗೆ 53 ವರ್ಷ ಕಠಿಣ ಸಜೆ ವಿಧಿಸಿದ ನ್ಯಾಯಾಲಯ

- Advertisement -
- Advertisement -

ಕಾಸರಗೋಡು; ಇಬ್ಬರು ಮದ್ರಸಾ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮದ್ರಾಸ ಅಧ್ಯಾಪಕನೊಬ್ಬನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯವು 53 ವರ್ಷ ಕಠಿಣ ಸಜೆ ಮತ್ತು 3.25 ಲಕ್ಷ ದಂಡ ವಿಧಿಸಿದೆ.

ವಿಟ್ಲ ಮೂಲದ ಅಬ್ದುಲ್ ಹನೀಫ್ ಮದನಿ(44)ಗೆ ಶಿಕ್ಷೆಗೊಳಗಾದ ಆರೋಪಿ. ಈತ ದಂಡ ಪಾವತಿಸದೆ ಇದ್ದರೆ ಮೂರುವರೆ ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸುವಂತರ ಸೂಚಿಸಲಾಗಿದೆ. ಪೋಕ್ಸೋ ಎರಡು ಪ್ರಕರಣಗಳಲ್ಲಿ ತಲಾ 20 ವರ್ಷ ಹಾಗೂ ಐಪಿಸಿಯ ಇತರ ಸೆಕಸನ್ ಗಳಡಿ 53 ವರ್ಷ ಶಿಕ್ಷೆ ವಿಧಿಸಲಾಗಿದೆ. ಒಟ್ಟು 53 ವರ್ಷ ಶಿಕ್ಷೆ ವಿಧಿಸಲಾಗಿದೆ.

ಅಂಬಲತ್ತರ ಪೊಲೀಸ್ ಠಾಣೆಯಲ್ಲಿ ಮದ್ರಸಾ ಶಿಕ್ಷಕನ‌ ವಿರುದ್ಧ ಬಾಲಕರಿಗೆ( ಅಸಹಜ) ಲೈಂಗಿಕ ಕಿರುಕುಳ‌ ನೀಡಿರುವ ಬಗ್ಗೆ ದೂರು ದಾಖಲಾಗಿತ್ತು.ಇದೀಗ ಪ್ರಕರಣದ ವಿಚಾರಣೆ ನಡೆದು ನ್ಯಾಯಾಲಯ ತೀರ್ಪು ನೀಡಿದೆ.ಈ ಮೊದಲು ಕೂಡ ಇದೇ ಶಿಕ್ಷಕನಿಗೆ ಇನ್ನೊಂದು ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎನ್ನಲಾಗಿದೆ..

- Advertisement -

Latest News

error: Content is protected !!