Saturday, April 27, 2024
Homeಇತರಹೂಸು ಬಿಟ್ಟಿದ್ದಕ್ಕೆ ಬರೋಬ್ಬರಿ 42 ಸಾವಿರ ದಂಡ ವಿಧಿಸಿದ ಪೊಲೀಸ್..!

ಹೂಸು ಬಿಟ್ಟಿದ್ದಕ್ಕೆ ಬರೋಬ್ಬರಿ 42 ಸಾವಿರ ದಂಡ ವಿಧಿಸಿದ ಪೊಲೀಸ್..!

spot_img
- Advertisement -
- Advertisement -

ಹೂಸು ಬಿಡುವುದು ಸಾಮಾನ್ಯ ಸಂಗತಿಯೇ. ಆಹಾರದ ವ್ಯತ್ಯಾಸದಿಂದಾಗಿ ಪ್ರತಿಯೊಬ್ಬರ ದೇಹದಲ್ಲಿ ಆಗುವ ಬದಲಾವಣೆಯಿಂದ ಗ್ಯಾಸ್ ಹೊರಹೋಗುತ್ತದೆ.

ಹೂಸು‌ ಬಿಟ್ಟಿದ್ದಕ್ಕಾಗಿ ವ್ಯಕ್ತಿಯೊಬ್ಬರಿಗೆ ಆಸ್ಟ್ರಿಯನ್ ಪೊಲೀಸರು ಐನೂರು ಯೂರೋ (ಭಾರತೀಯ ಮೌಲ್ಯ ಸುಮಾರು 42,830 ) ದಂಡ ವಿಧಿಸಿ ಅಚ್ಚರಿ ಮೂಡಿಸಿದ್ದಾರೆ.

ವಿಯೆನ್ನಾದಲ್ಲಿ ನಾಕಾಬಂದಿ ವೇಳೆ ಗುರುತು ಪರೀಕ್ಷಿಸಲು ತಡೆದ ಸಂದರ್ಭದಲ್ಲಿ ವ್ಯಕ್ತಿ ಹೂಸು ಬಿಟ್ಟಿದ್ದಾನೆ. ಅದರೆ ಉದ್ದೇಶಪೂರ್ವಕವಾಗಿ ಹೊಸು ಬಿಟ್ಟಿದ್ದಾನೆ ಎಂಬುದು ಪೊಲೀಸರ ಆರೋಪವಾಗಿದೆ ಜೊತೆಗೆ ಅದನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು ಜನತೆ ದಂಡ ಹಾಕಿದ್ದನ್ನು ಟೀಕಿಸಿದರೆ ಪೊಲೀಸರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಪರಿಶೀಲನೆಗೆ ಬಂದ ಅಧಿಕಾರಿಗೆ ಅಸಹಕಾರ ತೋರಿದ ವ್ಯಕ್ತಿ, ಅಧಿಕಾರಿಯತ್ತ ನೋಡುತ್ತಲೇ ಉದ್ದೇಶಪೂರ್ವಕವಾಗಿ ಹೂಸು ಬಿಟ್ಟಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಜೊತೆಗೆ ಆತ ಬೇಕಿದ್ದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ದಂಡವನ್ನು ಪ್ರಶ್ನಿಸಬಹುದು ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!