Wednesday, May 15, 2024
Homeಕರಾವಳಿಉಡುಪಿಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 50 ಸನ್ಯಾಸಿಗಳು ಸ್ಪರ್ಧೆ : ಭಟ್ಕಳದಿಂದ ತಾನು ಸ್ಪರ್ಧಿಸೋದಾಗಿ ಕನ್ಯಾಡಿ...

ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 50 ಸನ್ಯಾಸಿಗಳು ಸ್ಪರ್ಧೆ : ಭಟ್ಕಳದಿಂದ ತಾನು ಸ್ಪರ್ಧಿಸೋದಾಗಿ ಕನ್ಯಾಡಿ ಶ್ರೀರಾಮಕ್ಷೇತ್ರದ ಪೀಠಾಧಿಪತಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆ

spot_img
- Advertisement -
- Advertisement -

ಉತ್ತರ ಕನ್ನಡ : ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 50 ಸನ್ಯಾಸಿಗಳು ಸ್ಪರ್ಧಿಸಲಿದ್ದೇವೆ ಎಂದು ಬೆಳ್ತಂಗಡಿಯ ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಹೊಳೆ ಹಳೆಕೋಟೆ ಶ್ರೀಕ್ಷೇತ್ರ ಹನುಮಂತ ದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ಪ್ರೇರಣೆ ಪಡೆದಿರುವ ಸುಮಾರು 50 ಸನ್ಯಾಸಿಗಳು ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ ಎಂದಿದ್ದಾರೆ.

ಇಂದಿನ ಕಾಲದಲ್ಲಿ ರಾಜಕೀಯಕ್ಕೆ ಬರುವುದೇ ಪ್ರಚಾರಕ್ಕಾಗಿ, ಹಣಕ್ಕಾಗಿ, ಸುಖಭೋಗಕ್ಕಾಗಿ ಎಂದಿದ್ದಾರೆ.’ಉತ್ತರಾಖಂಡದ ನಾಗಾ ಸಾಧುಗಳ ಜೂನಾ ಅಖಾಡದಲ್ಲಿ ನಾನೂ ಒಬ್ಬ ಪಂಥನಿದ್ದೇನೆ. ಈಗಾಗಲೇ ಈ ಬಗ್ಗೆ ನಮ್ಮಲ್ಲಿ ಹಲವು ಚರ್ಚೆಗಳು ನಡೆದಿವೆ. ಸನಾತನ ಹಿಂದೂ ಧರ್ಮವನ್ನು ತಿದ್ದಬೇಕು. ಹಾಗಾಗಿ ರಾಮರಾಜ್ಯ ಕಲ್ಪನೆಯಲ್ಲಿ ಭಗವದ್ಗೀತೆಯನ್ನು ಪಕ್ಷದ ಚಿಹ್ನೆಯನ್ನಾಗಿ ಇಟ್ಟುಕೊಂಡು ಭಟ್ಕಳದಿಂದ ಪ್ರಾಯೋಗಿಕವಾಗಿ ನಾನು ಸ್ಪರ್ಧಿಸುವ ಯೋಚನೆಯಲ್ಲಿದ್ದೇನೆ’ ಎಂದು ತಿಳಿಸಿದರು.

- Advertisement -
spot_img

Latest News

error: Content is protected !!