Friday, May 17, 2024
Homeತಾಜಾ ಸುದ್ದಿಹಲ್ಲು ಕಿತ್ತ ವೈದ್ಯರ ವಿರುದ್ಧ ದೂರು ನೀಡಿದಾತನಿಗೆ 5 ಸಾವಿರ ದಂಡ ಹಾಕಿದ ಕೋರ್ಟ್, ಅಸಲಿಗೆ...

ಹಲ್ಲು ಕಿತ್ತ ವೈದ್ಯರ ವಿರುದ್ಧ ದೂರು ನೀಡಿದಾತನಿಗೆ 5 ಸಾವಿರ ದಂಡ ಹಾಕಿದ ಕೋರ್ಟ್, ಅಸಲಿಗೆ ಆಗಿದ್ದೇನು ಗೊತ್ತಾ?

spot_img
- Advertisement -
- Advertisement -

ಶಿವಮೊಗ್ಗ : ದಂತವೈದ್ಯರ ಮೇಲೆ ಸುಳ್ಳು ಆರೋಪ ಮಾಡಿದ ವ್ಯಕ್ತಿಗೆ  ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ 5 ಸಾವಿರ ರೂ. ದಂಡ ಹಾಕಿದೆ. ವೈದ್ಯರು ಯಾವುದೇ ನಿರ್ಲಕ್ಷ್ಯ ಮಾಡಿಲ್ಲ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

ದಂತವೈದ್ಯ ಡಾ. ಬಿ. ಪರಮೇಶ್ವರಪ್ಪ ಅವರ ವಿರುದ್ಧ ದೂರು ಸಲ್ಲಿಸಿದ್ದ ವ್ಯಕ್ತಿಗೆ 5 ಸಾವಿರ ರೂ. ದಂಡ ಹಾಕಿರುವ ಕೋರ್ಟ್, ದಂತವೈದ್ಯರಿಗೆ ದೂರು ನೀಡಿದ ವ್ಯಕ್ತಿಯೇ 5 ಸಾವಿರಗಳನ್ನು ದಂಡದ ರೂಪದಲ್ಲಿ ಪಾವತಿ ಮಾಡಬೇಕು ಎಂದು ಆದೇಶ ನೀಡಿದೆ.

2 ವರ್ಷಗಳ ಹಿಂದೆ ಮಲ್ಲಿಕಾರ್ಜುನ ಪಾಟೀಲ್ ಎಂಬುವವರು ಡಾ. ಬಿ. ಪರಮೇಶ್ವರಪ್ಪ ಬಳಿ ದವಡೆ ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಹೋಗಿದ್ದರು. ನೋವಿರುವ ಹಲ್ಲಿನ ಪಕ್ಕದ ಇನ್ನೊಂದು ಹಲ್ಲು ಸಹ ತುಂಬಾ ಹುಳುಕಾಗಿದ್ದು, ಹಲ್ಲು ಕೀಳಲು ತೊಂದರೆಯಾಗುತ್ತಿತ್ತು.

ಎರಡು ಹಲ್ಲನ್ನು ಕೀಳುವಾಗಿ ರಕ್ತಸ್ರಾವವಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮ್ಯಾಕ್ಸ್ ಆಸ್ಪತ್ರೆ ಹೋಗಲು ಸೂಚಿಸಿದರೂ ದೂರು ನೀಡಿದ ವ್ಯಕ್ತಿ ಬೇರೆ ಕಡೆ ಚಿಕಿತ್ಸೆ ಪಡೆದು ಮೂರು ದಿನ ಅಡ್ಮಿಟ್ ಆಗಿರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿದ್ದರು. ಹಲ್ಲು ಕಿತ್ತಿದ್ದರಿಂದ ಈಗ ತಲೆನೋವು ಬರುತ್ತಿದೆ ಎಂದು ದಂತವೈದ್ಯರ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯದ ದೂರು ನೀಡಿದ್ದರು.

ದೂರನ್ನು ಪರಿಶೀಲನೆ ಮಾಡಿದಾಗ ಎರಡೂ ಹಲ್ಲುಗಳು ಹುಳುಕಾಗಿದ್ದು ಒಂದು ಹಲ್ಲಿನ ಬೇರು ಇನ್ನೊಂದು ಹಲ್ಲಿನ ಬೇರಿನೊಂದಿಗೆ ಚಾಚಿಕೊಂಡಿತ್ತು. ಹುಳುಕು ಹಲ್ಲನ್ನು ತೆಗೆಯುವಾಗ ಪಕ್ಕದ ಹಲ್ಲೂ ಕಿತ್ತು ಬರುವುದು ಸಾಮಾನ್ಯವೆಂದು ಪರಿಗಣಿಸಲಾಯಿತು.

ಇಂತಹ ಸಂದರ್ಭದಲ್ಲಿ ವೈದ್ಯರು ರೋಗಿಯನ್ನು ಹೆಚ್ಚಿನ ಚಿಕತ್ಸೆಗಾಗಿ ತಕ್ಷಣ ಬೇರೆ ಆಸ್ಪತೆಗೆ ಕಳುಹಿಸುವುದು ವೈದ್ಯಕೀಯ ನಿರ್ಲಕ್ಷ್ಯ ಅಲ್ಲವೆಂದೂ ತೀರ್ಮಾನಿಸಲಾಯಿತು. ಘಟನೆ ನಡೆದು ಎರಡು ವರ್ಷಗಳ ನಂತರ ದೂರು ದಾಖಲಿಸಿದ್ದು, ಸರಿಯಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು.

ಹಣದ ಆಸೆಗಾಗಿ ಮಲ್ಲಿಕಾರ್ಜುನ ಪಾಟೀಲ್ ಎಂಬ ವ್ಯಕ್ತಿ ದೂರು ನೀಡಿ ಗ್ರಾಹಕರ ಆಯೋಗವನ್ನು ದುರುಪಯೋಗಪ ಪಡಿಸಿಕೊಂಡ ಕಾರಣಕ್ಕೆ 5 ಸಾವಿರ ರೂ. ದಂಡ ಹಾಕಲಾಯಿತು.

- Advertisement -
spot_img

Latest News

error: Content is protected !!