Monday, June 30, 2025
Homeಕರಾವಳಿಬೆಳ್ತಂಗಡಿ ತಾಲೂಕಿನಲ್ಲಿ ಕೊರೋನಾ ಆರ್ಭಟ: ಇಂದು ಒಂದೇ ದಿನ 5 ಕೊರೊನಾ ಪಾಸಿಟಿವ್ ಪತ್ತೆ

ಬೆಳ್ತಂಗಡಿ ತಾಲೂಕಿನಲ್ಲಿ ಕೊರೋನಾ ಆರ್ಭಟ: ಇಂದು ಒಂದೇ ದಿನ 5 ಕೊರೊನಾ ಪಾಸಿಟಿವ್ ಪತ್ತೆ

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನಲ್ಲಿ ಇಂದು ಒಂದೇ ದಿನ ಐದು ಮಂದಿಯಲ್ಲಿ ಕೊರೋನಾ ಪ್ರಕರಣ ಪತ್ತೆಯಾಗಿದೆ.

ಸುಲ್ಕೇರಿ ಮೊಗ್ರು ಗ್ರಾಮದಲ್ಲಿ ಜು.2 ರಂದು ಬಾಂಬೆಯಿಂದ ಊರಿಗೆ ಬಂದಿದ್ದ 57 ವರ್ಷ ಹಾಗೂ 37 ವರ್ಷದ ಇಬ್ಬರು ಮಹಿಳೆಯರು ಸುಲ್ಕೇರಿ ಮೊಗ್ರು ಶಾಲೆಯಲ್ಲಿ ಕ್ವಾರೆಂಟೈನ್ ನಲ್ಲಿದ್ದರು. ಅವರ ಗಂಟಲು ದ್ರವ ಪರೀಕ್ಷೆ ಇಂದು ಬಂದಿದ್ದು ಕೊರೊನಾ ಸೋಂಕು ದೃಢವಾಗಿದೆ.

ಬೆಳಿಗ್ಗೆ ಉಜಿರೆಯ ಪೆಟ್ರೋಲ್ ಪಂಪ್ ನ ಸಿಬ್ಬಂದಿಯೊಬ್ಬರಿಗೆ ಕೊರೋನಾ ದೃಢವಾಗಿತ್ತು.

ನಂತರ ಮದ್ದಡ್ಕದ 28 ವರ್ಷದ ಯುವಕನಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿತ್ತು.

ನಂತರ ಅಳದಂಗಡಿಯ ವ್ಯಕ್ತಿಯೊಬ್ಬರಿಗೆ ಕೊರೋನಾ ದೃಢವಾಗಿತ್ತು.

ಹಾಗೆಯೆ ಈಗ ಸುಲ್ಕೇರಿಮೊಗ್ರಿನ ಇಬ್ಬರು ಮಹಿಳೆಯರಿಗೆ ಸೋಂಕು ತಗುಲಿರುವ ಮೂಲಕ ಇಂದು ಒಂದೇ ದಿನ ಐದು ಕೊರೋನಾ ಪ್ರಕರಣ ತಾಲೂಕಿನಲ್ಲಿ ಕಂಡು ಬಂದಂತಾಗಿದೆ.

ಅಳದಂಗಡಿಯ ಒಬ್ಬರನ್ನು ಮಂಗಳೂರಿಗೆ ಶಿಪ್ಟ್ ಮಾಡಲಾಗಿದ್ದು, ಉಳಿದ ನಾಲ್ಕು ಸೋಂಕಿತರನ್ನು ಬೆಳ್ತಂಗಡಿಯಲ್ಲಿ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

- Advertisement -
spot_img

Latest News

error: Content is protected !!