Thursday, June 4, 2026
Homeತಾಜಾ ಸುದ್ದಿಮಗನ ಎದುರೇ ಸ್ನೇಹಿತರೊಂದಿಗೆ ಸೇರಿ ಹೆಂಡತಿಯ ಮೇಲೆ ಅತ್ಯಾಚಾರ

ಮಗನ ಎದುರೇ ಸ್ನೇಹಿತರೊಂದಿಗೆ ಸೇರಿ ಹೆಂಡತಿಯ ಮೇಲೆ ಅತ್ಯಾಚಾರ

- Advertisement -
- Advertisement -

ತಿರುವನಂತಪುರಂ: ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿ ಗಂಡ ಮತ್ತು ಆತನ ನಾಲ್ವರು ಸ್ನೇಹಿತರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಕೇರಳದ ತಿರುವನಂತಪುರಂ ಸಮೀಪದ ಕದಿಲಾಂಕ್ಕುಲಂ ಬಳಿ ನಡೆದಿದೆ.

ಮಹಿಳೆಯ 5 ವರ್ಷದ ಮಗನ ಎದುರಲ್ಲೇ ಈ ಹೇಯ ಕೃತ್ಯ ಎಸಗಲಾಗಿದೆ.

ಘಟನೆಯ ವಿವರ:

25 ವರ್ಷದ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಗಂಡ ಬೀಚ್ ನೋಡಲು ಕರೆದುಕೊಂಡು ಹೋಗಿದ್ದಾನೆ. ನಂತರ ಸ್ನೇಹಿತನ ಮನೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಬಲವಂತವಾಗಿ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಅಲ್ಲಿಂದ ತಪ್ಪಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ಯುವಕನೊಬ್ಬ ಮನೆಗೆ ಕಳುಹಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಬಳಿಕ ಮಹಿಳೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಕೇರಳ ರಾಜ್ಯ ಮಹಿಳಾ ಆಯೋಗ ಪ್ರಕರಣ ದಾಖಲಿಸಿ ತನಿಖೆ ಸೂಚಿಸಿದೆ

- Advertisement -

Latest News

error: Content is protected !!