Sunday, June 7, 2026
Homeಪ್ರಮುಖ-ಸುದ್ದಿಕರ್ನಾಟಕದಲ್ಲಿ ದಾಖಲೆ ಬರೆದ ಕೊರೊನಾ, 4169 ಹೊಸ ಪ್ರಕರಣಗಳು ಪತ್ತೆ, 104 ಮಂದಿ ಮಹಾಮಾರಿಗೆ ಬಲಿ,...

ಕರ್ನಾಟಕದಲ್ಲಿ ದಾಖಲೆ ಬರೆದ ಕೊರೊನಾ, 4169 ಹೊಸ ಪ್ರಕರಣಗಳು ಪತ್ತೆ, 104 ಮಂದಿ ಮಹಾಮಾರಿಗೆ ಬಲಿ, ಬೆಂಗಳೂರಿನಲ್ಲಿ 2344 ಮಂದಿಗೆ ಕೊರೊನಾ ಪಾಸಿಟಿವ್

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಇವತ್ತು ಭರ್ಜರಿ ಸ್ಕೋರ್ ಕಲೆ ಹಾಕಿದೆ ಮಹಾಮಾರಿ ಕೊರೊನಾ. ರಾಜ್ಯದಲ್ಲಿ ಇದುವರೆಗೂ ಕಂಡು ಬರದಷ್ಟು ಪ್ರಕರಣಗಳು ಇವತ್ತು ವರದಿಯಾಗಿವೆ. ಒಂದೇ ದಿನದಲ್ಲಿ 4169 ಹೊಸ ಕೊರೊನಾ ಕೇಸುಗಳು ಪತ್ತೆಯಾಗಿವೆ. ಆ ಮೂಲಕ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 51,422ಕ್ಕೆ ಏರಿಕೆ. ಹಾಗೇ ಒಂದೇ ದಿನ 104 ಮಂದಿಯನ್ನು ಕೊರೊನಾ ಬಲಿ ಪಡೆದುಕೊಂಡಿದೆ.

ಇನ್ನು ಬೆಂಗಳೂರಿನ ಅಂಕಿ ಅಂಶವನ್ನು ನೋಡಿದ್ರೆ ಎದೆ ಝಲ್ ಅನ್ನುತ್ತೆ. ಇವತ್ತು ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ 2,344 ಮಂದಿ ಕೊರೊನಾ ಸೋಂಕಿತರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 25,288ಕ್ಕೆ ಏರಿಕೆಯಾಗಿದೆ. ಅಲ್ಲದೇ ಸಿಲಿಕಾನ್ ಸಿಟಿಯಲ್ಲಿ ಇಂದು ಕೋವಿಡ್ 70 ಮಂದಿಯನ್ನು ಬಲಿ ಪಡೆದುಕೊಂಡಿದೆ.

ರಾಜ್ಯದಲ್ಲಿ ಸದ್ಯ 30, 655 ಸಕ್ರೀಯ ಪ್ರಕರಣಗಳಿದ್ದು, ಇವತ್ತು 1,263 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಟಾರ್ಜ್ ಆಗಿದ್ದಾರೆ. ಇನ್ನು ಬೆಂಗಳೂರಿನಲ್ಲಿ 18, 828 ಸಕ್ರೀಯ ಪ್ರಕರಣಗಳಿದ್ದು, 497 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

- Advertisement -

Latest News

error: Content is protected !!