Monday, May 20, 2024
Homeತಾಜಾ ಸುದ್ದಿಸುಳ್ಯ ನಗರ ಪಂಚಾಯತಿಯಲ್ಲಿ 4.2 ಕೋಟಿ ಮಿಗತೆ ಬಜೆಟ್ ಮಂಡನೆ

ಸುಳ್ಯ ನಗರ ಪಂಚಾಯತಿಯಲ್ಲಿ 4.2 ಕೋಟಿ ಮಿಗತೆ ಬಜೆಟ್ ಮಂಡನೆ

spot_img
- Advertisement -
- Advertisement -

ಸುಳ್ಯ: ಸುಳ್ಯನಗರ ಪಂಚಾಯತ್‌ನ 2022-23ನೇ ಸಾಲಿನ ಆಯ ವ್ಯಯ ಪಟ್ಟಿಯನ್ನು ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಾ.29ರಂದು ಮಂಡಿಸಿದರು. ಈ ಆರ್ಥಿಕ ವರ್ಷದಲ್ಲಿ 20.75 ಕೋಟಿ ಆದಾಯ ಮತ್ತು 16.55 ಕೋಟಿ ಖರ್ಚು ನಿರೀಕ್ಷಿಸುವ 4.20 ಕೋಟಿ ಮಿಗತೆಯ ಬಜೆಟನ್ನು ಅವರು ಮಂಡಿಸಿದ್ದಾರೆ.

ಎಸ್‌ಎಫ್‌ಸಿ ವೇತನ ಅನುದಾನ 38 ಲಕ್ಷ, ದಾರಿದೀಪ ವಿದ್ಯುತ್ ಅನುದಾನ 20 ಲಕ್ಷ, ನೀರು ಸರಬರಾಜು ವಿದ್ಯುತ್ ಅನುದಾನ 88 ಲಕ್ಷ, ಎಸ್‌ಎಫ್‌ಸಿ ಮುಕ್ತ ನಿಧಿ 34 ಲಕ್ಷ, ಸ್ವಚ್ಚ ಭಾರತ್ ಮಿಷನ್ 77 ಲಕ್ಷ,15ನೇ ಹಣಕಾಸು 85 ಲಕ್ಷ, ಎಸ್‌ಎಫ್‌ಸಿ ವಿಶೇಷ ಅನುದಾನ 20 ಲಕ್ಷ, ನಗರೋತ್ಥಾನ ಅಮೃತ್ ಹಂತ 4 ರಲ್ಲಿ 4, 4. 25 ಕೋಟಿ ಅನುದಾನ ನಿರೀಕ್ಷಿಸಲಾಗಿದೆ.


ಕಟ್ಟಡ ಬಾಡಿಗೆಯಿಂದ 38 ಲಕ್ಷ, ಘನ ತ್ಯಾಜ್ಯ ನಿರ್ವಹಣಾ ಶುಲ್ಕ 17 ಲಕ್ಷ, ನೀರು ಸರಬರಾಜು ಶುಲ್ಕ1.23 ಕೋಟಿ, ಮೀನು ಮಾರುಕಟ್ಟೆ ಬಾಡಿಗೆ 14 ಲಕ್ಷ, ಆಸ್ತಿ ತೆರಿಗೆ ಆದಾಯ 1.95 ಕೋಟಿ, ಇತರ ಶುಲ್ಕಗಳು ಸೇರಿ ಒಟ್ಟು 14, 28,34,182 ರೂ ಆದಾಯ ನಿರೀಕ್ಷಿಸಲಾಗಿದೆ. ಖರ್ಚಿನಲ್ಲಿ ಸಿಬ್ಬಂದಿಗಳ ವೇತನಕ್ಕೆ74.97 ಲಕ್ಷ,ದಾರಿ ದೀಪ ನಿರ್ವಹಣೆ 20 ಲಕ್ಷ ನೀರು ಸರಬರಾಜು, ವಿದ್ಯುತ್ ವೆಚ್ಚ 91 ಲಕ,14,15ನೇ ಹಣಕಾಸು ಅನುದಾನ, ಪಂಚಾಯತ್ ನಿಧಿಯಲ್ಲಿ ರಸ್ತೆ, ಚರಂಡಿ, ಹಾಗು ಇತರ ಅಭಿವೃದ್ಧಿ ಯೋಜನೆಗಳಿಗೆ 3.47 ಕೋಟಿ, ಶಾಸಕರ ಸ್ಥಳೀಯಾಭಿವೃದ್ಧಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ 2 ಕೋಟಿ, ಅಮೃತ್ ನಗರೋತ್ಥಾನ ಯೋಜನೆಯಲ್ಲಿ 4.25ಕೋಟಿ, ಸ್ವಚ್ಚಭಾರತ್ ಮಿಷನ್ ಯೋಜನೆಯಡಿ ವಾಹನ, ಯಂತ್ರೋಪಕರಣ ಖರೀದಿಗೆ 77 ಲಕ್ಷ, ಕಟ್ಟಡಗಳ ದುರಸ್ಥಿಮತ್ತು ನಿರ್ವಹಣೆಗೆ 10 ಲಕ್ಷ, ರಸ್ತೆಗಳ ದುರಸ್ತಿ ಮತ್ತು ನಿರ್ವಹಣೆ 60 ಲಕ್ಷ,ಚರಂಡಿ ದುರಸ್ತಿ ಮತ್ತು ನಿರ್ವಹಣೆಗೆ 25 ಲಕ್ಷ, ಘನ ತ್ಯಾಜ್ಯ ನಿರ್ವಹಣೆ ಮತ್ತು ಪೌರ ಕಾರ್ಮಿಕರ ವೇತನ 45 ಲಕ್ಷ, ನೀರು ಸರಬರಾಜು ದುರಸ್ತಿ, ನಿರ್ವಹಣೆ ಸೇರಿ 48 ಲಕ್ಷ, ನೀರು ಸರಬರಾಜು ಸಿಬ್ಬಂದಿ ಹೊರಗುತ್ತಿಗೆ ವೆಚ್ಚ12 ಲಕ್ಷ ಸೇರಿ ಒಟ್ಟು 16, 55, 30, 400 ರೂ ಖರ್ಚು ನಿರೀಕ್ಷಿಸುವ ಬಜೆಟ್ ಮಂಡಿಸಲಾಗಿದೆ.


ಈ ವರ್ಷ ನಗರದಲ್ಲಿ ಸರಳೀಕೃತ ಮಹಾ ಯೋಜನೆ ಜಾರಿ ಮಾಡಲಾಗುವುದು ಎಂದು ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಘೋಷಿಸಿ ದರು.ಮುಂದೇ ಕಂಪ್ಯೂಟರೀಕೃತ ನೀರಿನ ಬಿಲ್ ನೀಡಲಾಗುವುದು. ಸೈನಿಕರ ಸ್ಮಾರಕ ಭವನ ನಿರ್ಮಾಣ ಮಾಡಲಾಗುವುದು.ಪೌರ ಕಾರ್ಮಿಕ ರ ವಸತಿ ಗೃಹ ನಿರ್ಮಾಣ ಮಾಡಲಾಗುವುದು. ವಿವಿಧ ಯೋಜನೆಗಳಲ್ಲಿ ಬಾಕಿಯಾದ ಮನೆಗಳನ್ನು ಪೂರ್ತಿ ಮಾಡಲು ಸಹಾಯಧನ ನೀಡಲಾಗುವುದು. ರಸ್ತೆಗಳ 2.9 ಕೋಟಿ ಅನುದಾನ ನೀಡಲಾಗುವುದು.ಸಶಾನಗಳ ಅಭಿವೃದ್ಧಿಗೆ 12 ಲಕ್ಷ ಅನುದಾನ ನೀಡಲಾಗುವುದು.ಮಳೆ ನೀರು ಕೊಯ್ದು, ಇಂಗು ಗುಂಡಿ ನಿರ್ಮಾಣಕ್ಕಾಗಿ ಪ್ರೋತ್ಸಾಹ ಧನ ನೀಡಲಾಗುವುದು.ಪ್ಲಾಸ್ಟಿಕ್ ಮುಕ್ತ ನಗರ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ಅವರು ಘೋಷಿಸಿದರು.ಬಳಿಕ ಬಜೆಟ್‌ ಕುರಿತು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ-ವಿಪಕ್ಷ ಸದಸ್ಯರ ಮಧ್ಯೆ ಬಿರುಸಿನ ಚರ್ಚೆ ವಾಗ್ವಾದ ನಡೆಯಿತು.


ನಗರ ಪಂಚಾಯತ್‌ನಲ್ಲಿ ಇಂದು ಮಂಡಿಸಿದ ಬಜೆಟ್ ನಿರಾಶಾದಾಯಕವಾಗಿತ್ತು ಎಂದು ನಗರ ಪಂಚಾಯತ್ ವಿಪಕ್ಷ ಸದಸ್ಯರು ಟೀಕಿಸಿದ್ದಾರೆ. ಅಭಿವೃದ್ಧಿಗೆ ವಿಶೇಷ ಯೋಜನೆಗಳಿಲ್ಲ, ಸಚಿವರು ಸಂಸದರು, ಡಬಲ್ ಎಂಜಿನ್ ಸರಕಾರ ಇದ್ದರೂ ಯಾವುದೇ ವಿಶೇಷ ಅನುದಾನದ ಪ್ರಸ್ತಾವನೆ ಗಳಿಲ್ಲದ ಬಜೆಟ್ ನಿಷ್ಪಯೋಜಕ ಮತ್ತು ನಿರಾಶಾ ದಾಯಕ ಎಂದು ವಿಪಕ್ಷ ಸದಸ್ಯ ಎಂ.ವೆಂಕಪ್ಪಗೌಡ ಹೇಳಿದ್ದಾರೆ. ವಿಪಕ್ಷ ಸದಸ್ಯ ಕೆ.ಎಸ್.ಉಮ್ಮರ್ ಮಾತನಾಡಿ ಅಭಿವೃದ್ಧಿಗೆ ಅನುದಾನ ಇಲ್ಲದ, ದೂರದೃಷ್ಠಿ ಇಲ್ಲದ ಈ ಬಜೆಟ್ ಒಪ್ಪುವಂತದ್ದಲ್ಲ ಎಂದು ಹೇಳಿದರು. ಅಧಿಕಾರಿಗಳು ಸಿದ್ಧಪಡಿಸಿದ ಬಜೆಟನ್ನು ಅಧ್ಯಕ್ಷರು ಓದಿದ್ದಾರೆ ಅಸ್ಟೇ.ಆಡಳಿತಕ್ಕೆ ನಗರದ ಅಭಿವೃದ್ಧಿಗೆ ದೂರದೃಷ್ಠಿಯ ಚಿಂತನೆ ಗಳಿಲ್ಲ ಎಂದು ಅವರು ಹೇಳಿದರು.


ಉಪಾಧ್ಯಕ್ಷೆ ಸರೋಜಿನಿ ಪೆಲಡ್ಕ, ಸ್ಥಾಯಿ ಸಮಿತಿ ಶೀಲಾ ಅರುಣ ಕುರುಂಜಿ, ಸದಸ್ಯರಾದ ಬಾಲಕೃಷ್ಣ ಭಟ್, ಬುದ್ಧನಾಯ್ಕ, ಬಾಲಕೃಷ್ಣ ರೈ, ಸುಧಾಕರ, ಡೇವಿಡ್ ಧೀರಾ ಕ್ರಾಸ್ತಾ, ಶರೀಫ್ ಕಂಠಿ, ನಾರಾಯಣ, ಶಶಿಕಲಾ, ಕಿಶೋರಿ ಶೇರ್, ಸುಶೀಲಾ ಜಿನ್ನಪ್ಪ, ಪೂಜಿತ, ಪ್ರವಿತಾ ಪ್ರಶಾಂತ್, ಬೂಡು ರಾಧಾಕೃಷ್ಣರೈ, ರೋಹಿತ್ ಕೊಯಿಂಗೋಡಿ, ಯತೀಶ್ ಬೀರಮಂಗಲ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!