Thursday, April 25, 2024
Homeಕರಾವಳಿಕೋವಿಡ್ ಲಾಕ್ ಡೌನ್ ಸಮಯದಲ್ಲಿ 350 ಕೋರ್ಸ್ ಪಾಸ್ ಮಾಡಿ ವಿಶ್ವದಾಖಲೆ ಬರೆದ ಯುವತಿ

ಕೋವಿಡ್ ಲಾಕ್ ಡೌನ್ ಸಮಯದಲ್ಲಿ 350 ಕೋರ್ಸ್ ಪಾಸ್ ಮಾಡಿ ವಿಶ್ವದಾಖಲೆ ಬರೆದ ಯುವತಿ

spot_img
- Advertisement -
- Advertisement -

ತಿರುವನಂತಪುರಂ : ಕೋವಿಡ್-19 ಲಾಕ್ ಡೌನ್ ನಿಂದಾಗಿ ಬಹುತೇಕ ಮಂದಿ ತಮ್ಮ ಕುಟುಂಬದೊಂದಿಗೆ ಕಾಲಕಳೆದರು. ಕೆಲವರು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇನ್ನು ಕೆಲವರು ಲಾಕ್ ಡೌನ್ ವೇಳೆಯನ್ನು ಉಪಯುಕ್ತವಾಗಿ ಕಳೆಯುವ ಪ್ರಯತ್ನ ಮಾಡಿದ್ದರು. ಆದರೆ, ಇಲ್ಲೊಬ್ಬ ಯುವತಿ ಲಾಕ್ ಡೌನ್ ಅನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದ್ದಾರೆ. ಮೂರು ತಿಂಗಳ ಅವಧಿಯಲ್ಲಿ 350 ಕೋರ್ಸ್ ಗಳನ್ನು ಪೂರ್ಣಗೊಳಿಸಿದ್ದಾರೆ.

ಕೇರಳದ ಕೊಚ್ಚಿಯಲ್ಲಿರುವ ಎಂಇಎಸ್​ ಕಾಲೇಜಿನ ಎಂಎಸ್ಸಿ ಬಯೋಕೆಮಿಸ್ಟ್ರಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿರುವ ಆರತಿ ರೆಘುನಾಥ್​, ಕೇವಲ ಮೂರು ತಿಂಗಳಲ್ಲಿ 350 ಕೋರ್ಸ್​ ಪೂರ್ಣಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕೊಚ್ಚಿಯ ಎಲಮಕ್ಕರ ನಿವಾಸಿಯಾಗಿರುವ ಆರತಿ, ಯೂನಿವರ್ಸಲ್​ ರೆಕಾರ್ಡ್​ ಫೋರಮ್​ನಲ್ಲಿ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಆನ್ ಲೈನ್ ಕೋರ್ಸ್ ಗಳ ಬಗ್ಗೆ ಕಾಲೇಜು ಉಪನ್ಯಾಸಕರಿಂದ ತಿಳಿದುಕೊಂಡಿದ್ದೆ. ಬಹಳಷ್ಟು ವಿಭಾಗದ ಕೋರ್ಸುಗಳಿವೆ. ಬೇರೆ ಅವಧಿಯ, ಬೇರೆ ಬೇರೆ ಪಠ್ಯಕ್ರಮದ ಕೋರ್ಸುಗಳಿವೆ. ಆದರೆ ಉಪನ್ಯಾಸಕರ ಸಹಾಯದಿಂದ ಅವುಗಳನ್ನು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಆರತಿ ಹೇಳಿಕೊಂಡಿದ್ದಾರೆ.

ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಜಾನ್ ಹಾಕಿನ್ಸ್ ಯುನಿವರ್ಸಿಟಿ, ಯುನಿವರ್ಸಿಟಿ ಆಫ್ ವರ್ಜೀನಿಯಾ, ಯುನಿವರ್ಸಿಟಿ ಆಫ್ ಕೊಲೊರಾಡೋ ಬೌಲ್ಡರ್, ಯುನಿವರ್ಸಿಟಿ ಆಫ್ ನ್ಯೂಯಾರ್ಕ್, ಯುನಿವರ್ಸಿಟಿ ಆಫ್ ಡೆನ್ಮಾರ್ಕ್, ಯುನಿವರ್ಸಿಟಿ ಆಫ್ ಕೋಪನ್ ಹೆಗನ್ ಗಳ ಕೋರ್ಸುಗಳನ್ನು ಆರತಿ ಪೂರ್ಣಗೊಳಿಸಿದ್ದು, ವಿಶ್ವದಾಖಲೆ ಬರೆದಿದ್ದಾರೆ.

ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಅಜಿಮ್ಸ್​ ಪಿ ಮುಹಮ್ಮದ್​, ಸಂಯೋಜಕರಾದ ಹನೀಫಾ ಕೆ ಜಿ ಮತ್ತು ನಮ್ಮ ಕ್ಲಾಸ್​ ಟೀಚರ್​ ನೀಲಿಮಾ ಟಿ.ಕೆ. ಅವರ ಬೆಂಬಲದಿಂದ ಈ ಎಲ್ಲ ಕೋರ್ಸ್​ಗಳನ್ನು ಕೆಲವೇ ವಾರಗಳಲ್ಲಿ ಮುಗಿಸಿದೆ ಎಂದು ಆರತಿ ಹೇಳಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!