Saturday, June 6, 2026
Homeತಾಜಾ ಸುದ್ದಿವೃದ್ಧರೊಬ್ಬರ ಮೂತ್ರಪಿಂಡದಲ್ಲಿತ್ತು ಬರೋಬ್ಬರಿ 300 ಕಲ್ಲುಗಳು

ವೃದ್ಧರೊಬ್ಬರ ಮೂತ್ರಪಿಂಡದಲ್ಲಿತ್ತು ಬರೋಬ್ಬರಿ 300 ಕಲ್ಲುಗಳು

- Advertisement -
- Advertisement -

ಆಂಧ್ರಪ್ರದೇಶ; ವೃದ್ಧರೊಬ್ಬರ ಕಿಡ್ನಿಯಿಂದ ಬರೋಬ್ಬರಿ 300 ಕಲ್ಲುಗಳನ್ನು ವೈದ್ಯರು ಹೊರ ತೆಗೆದ ಅಚ್ಚರಿಯ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಇಲ್ಲಿನ  ಕರೀಂನಗರ ಜಿಲ್ಲೆಯ ನಿವಾಸಿ ರಾಮ್ ರೆಡ್ಡಿ ಕಳೆದ ಕೆಲವು ತಿಂಗಳುಗಳಿಂದ ಬೆನ್ನು ಮತ್ತು ಪಾರ್ಶ್ವ ಪ್ರದೇಶದಲ್ಲಿ ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಸಿಟಿ ಸ್ನ್ಯಾನ್ ಮಾಡಿದಾಗ ಬಲ ಮೂತ್ರಪಿಂಡದಲ್ಲಿ 7 ಸೆಂ.ಮೀ.ಗಿಂತ ಹೆಚ್ಚಿನ ಗಾತ್ರದ ಬೃಹತ್ ಕಲ್ಲು ಇರುವುದು ಗೊತ್ತಾಗಿದೆ.7 ಮಿಮೀ ನಿಂದ 15 ಮಿಮೀ ಗಾತ್ರದ ಕಲ್ಲುಗಳು ಸಾಮಾನ್ಯವಾಗಿ ರೋಗಿಗಳಲ್ಲಿ ಕಂಡು ಬಂದಿವೆ.

ತಾಂತ್ರಿಕವಾಗಿ ಸವಾಲಿನ ನಡುವೆ ಮೂತ್ರಪಿಂಡದಿಂದ ಎಲ್ಲಾ 300 ಕಲ್ಲುಗಳನ್ನು ವೈದ್ಯರು ಹೊರ ತೆಗೆದಿದ್ದಾರೆ. ರೋಗಿಯನ್ನು ಶಸ್ತ್ರಚಿಕಿತ್ಸೆಯ ನಂತರ ಎರಡನೇ ದಿನ ಡಿಸ್ಚಾರ್ಜ್ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

- Advertisement -

Latest News

error: Content is protected !!