ಬೆಂಗಳೂರು: : ನಿನ್ನೆಯಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮದ್ಯದಂಗಡಿಗಳು ಪುನರಾರಂಭಗೊಂಡಿದ್ದು, ಇಂದು ಕೂಡ ಬೆಳಗ್ಗೆಯಿಂದಲೇ ಮದ್ಯದ ಅಂಗಡಿ ಮುಂದೆ ಜನತೆ ದಾಂಗುಡಿ ಇಟ್ಟಿದ್ದರು.
ಇಂದು ನಡೆದ ಎಣ್ಣೆ ವಹಿವಾಟಿನಲ್ಲಿ ಭರ್ಜರಿ ವ್ಯಾಪಾರ ಆಗಿದೆ,. ಇಂದು ಕೂಡ ಒಂದು ದಿನದಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಎಷ್ಟು ವಹಿವಾಟು ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ, ಇಂದು ಎರಡನೇ ದಿನವೂ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದ್ದು,: ರಾಜ್ಯ ಸರ್ಕಾರಕ್ಕೆ 197 ಕೋಟಿ,ರೂ ಆದಾಯ ಸಿಕ್ಕಿದೆ.
ಹೌದು, ಇಂದಿನ ಮದ್ಯ ಮಾರಾಟದಿಂದ ಬರೋಬ್ಬರಿ 197 ಕೋಟಿ ರೂ ಆದಾಯ ಬಂದಿದೆ, ಈ ಮೂಲಕ ಮೊದಲನೇ ದಿನದ ದಾಖಲೆಯನ್ನು ಮುರಿದಿದೆ.ಅಬಕಾರಿ ಇಲಾಖೆ ಮಾಹಿತಿ ಪ್ರಕಾರ ; ಮೇ 5 ರಂದು ಅಂದಾಜು 7.02 ಲಕ್ಷ ಲೀಟರ್ ಬಿಯರ್ ಮತ್ತು 36.37 ಲಕ್ಷ ಲೀಟರ್ ಭಾರತೀಯ ತಯಾರಿಕಾ ಮದ್ಯ ಮಾರಾಟವಾಗಿದೆ. ಬಿಯರ್ ನಿಂದ 15 ಕೋಟಿ ರೂ. ಭಾರತೀಯ ಮದ್ಯದಿಂದ 182 ಕೋಟಿ ರೂ ಆದಾಯ ಬಂದಿದೆ. ಇಂದಿನ ಒಟ್ಟು ಆದಾಯ ಅಂದಾಜು ಮೌಲ್ಯ ಸುಮಾರು 197 ಕೋಟಿ ರೂಪಾಯಿಯಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.