Wednesday, June 3, 2026
Homeತಾಜಾ ಸುದ್ದಿಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ: ಅಕ್ರಮವಾಗಿ ಸಾಗಿಸುತ್ತಿದ್ದ 25 ಸಾವಿರ ಯುಎಸ್ ಡಾಲರ್...

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ: ಅಕ್ರಮವಾಗಿ ಸಾಗಿಸುತ್ತಿದ್ದ 25 ಸಾವಿರ ಯುಎಸ್ ಡಾಲರ್ ವಶ

- Advertisement -
- Advertisement -

ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ 25 ಸಾವಿರ ಯುಎಸ್ ಡಾಲರ್ ವಿದೇಶಿ ಕರೆನ್ಸಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಸಾಗಾಟದ ವಿದೇಶಿ ಕರೆನ್ಸಿಯನ್ನು ಆರೋಪಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ದುಬೈಗೆ ಸಾಗಾಟ ಮಾಡಲೆತ್ನಿಸುತ್ತಿದ್ದ. ಮಂಗಳೂರು ಮೂಲದ ಈ ಪ್ರಯಾಣಿಕ ಸ್ಪೈಸ್ ಜೆಟ್ ಮೂಲಕ ದುಬೈಗೆ ಹಾರಲೆತ್ನಿಸುತ್ತಿದ್ದ. ಆದರೆ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ತಪಾಸಣೆ ಮಾಡಿದ ವೇಳೆ ಈತ ಅಕ್ರಮವಾಗಿ ದುಬೈಗೆ ವಿದೇಶಿ ಕರೆನ್ಸಿಯನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ‌. ತಕ್ಷಣ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಈತನಲ್ಲಿದ್ದ 18,80,000 ಲಕ್ಷ ರೂ. ಮೌಲ್ಯದ 25,000 ರೂ‌. ಯುಎಸ್ ಡಾಲರ್ ಅನ್ನು ಸೀಸ್ ಮಾಡಿದ್ದಾರೆ.

- Advertisement -

Latest News

error: Content is protected !!