ಬೆಳ್ತಂಗಡಿ: ಅಂದರ್ ಬಾಹರ್ ಆಟ ಆಡುತ್ತಿದ್ದ 23 ಜನರನ್ನು ಪೊಲೀಸರು ಬಂಧಿಸಿ ಓರ್ವ ಪರಾರಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಮಡಂತ್ಯಾರು ಪೇಟೆಯ ಬಳಿಯಿರುವ ಅಲ್ಬರ್ಟ್ ಡಿ ಸೋಜಾ ಎಂಬವರಿಗೆ ಸೇರಿದ ಕಟ್ಟಡದ ಹಿಂಭಾಗದಲ್ಲಿರುವ ಶೆಡ್‌ನಲ್ಲಿ ನಡೆದಿದೆ.
ಸುಮಾರು 15-20 ಜನರು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಉಲಾಯಿ –ಪಿದಾಯಿ (ಅಂದರ್-ಬಾಹರ್ ) ಎಂಬ ಅದೃಷ್ಟದ ಆಟವನ್ನು ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಪುಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್‌ಐ (ಕಾ&ಸು) ನಂದಕುಮಾರ್ ಎಂ.ಎಂ ರವರು ಸಿಬ್ಬಂದಿಗಳೊಂದಿಗೆ ಧಾಳಿ ನಡೆಸಿ ಕೃತ್ಯದಲ್ಲಿ ತೊಡಗಿದ್ದ 23 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು, ಜುಗಾರಿ ಆಟಕ್ಕೆ ಉಪಯೋಗಿಸಿದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಸ್ವಾಧೀನಪಡಿಸಿಕೊಂಡಿರುವ ನಗದು ಸೇರಿ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 36729/- ಆಗಬಹುದು. ಈ ಬಗ್ಗೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ದಿನಾಂಕ: 20.09.2024 ರಂದು ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 67/2024 ಕಲಂ: 79, 80 ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿರುತ್ತದೆ.
ಬಂಧಿತ ಆರೋಪಿಗಳು:
1] ಮೋನಪ್ಪ ಪೂಜಾರಿ, ಬಿ.ಸಿ ರೋಡ್, ಬಂಟ್ವಾಳ (ಜುಗಾರಿ ಕೃತ್ಯವನ್ನು ನಡೆಸುತ್ತಿದ್ದಾತ, ಪರಾರಿಯಾಗಿರುತ್ತಾನೆ.)
2] ಅಬ್ದುಲ್ ಖಾದರ್, ಪ್ರಾಯ: 39 ವರ್ಷ, ಕುವೆಟ್ಟು ಬೆಳ್ತಂಗಡಿ
3] ಮೊಹಮ್ಮದ್ ಹೈದರ್, ಪ್ರಾಯ: 40 ವರ್ಷ, ಮೂಡುಪಡುಕೋಡಿ ಬಂಟ್ವಾಳ
4] ಜೋಸ್ ಥಾಮಸ್, ಪ್ರಾಯ: 51 ವರ್ಷ,ಉಳಿ ಬಂಟ್ವಾಳ.
5] ಅಬೂಬಕ್ಕರ್, ಪ್ರಾಯ: 61 ವರ್ಷ, ಉಜಿರೆ ಬೆಳ್ತಂಗಡಿ.
6] ಲೋಕನಾಥ ಬಂಗೇರ, ಪ್ರಾಯ: 66 ವರ್ಷ, ತೆಂಕಕಜೆಕಾರು ಬಂಟ್ವಾಳ.
7] ತುಕರಾಮ್, ಪ್ರಾಯ: 40,ನ್ಯಾಯತರ್ಪು ಬೆಳ್ತಂಗಡಿ
8] ಅಬ್ದುಲ್ ರಹಿಮಾನ್, ಪ್ರಾಯ: 74 ವರ್ಷ,ಕುವೆಟ್ಟು ಬೆಳ್ತಂಗಡಿ
9] ಯಶೋಧರ, ಪ್ರಾಯ: 42 ವರ್ಷ, ಕಾವಳಮೂಡೂರು ಬಂಟ್ವಾಳ
10] ರಮೇಶ್ ಆಚಾರ್ಯ, ಪ್ರಾಯ 52 ವರ್ಷ,ಮಾಲಾಡಿ, ಬೆಳ್ತಂಗಡಿ
11] ಜಿ.ಎ.ದಾವೂದ್, ಪ್ರಾಯ 40 ವರ್ಷ, ಪಡಂಗಡಿ ಬೆಳ್ತಂಗಡಿ
12] ರಿಯಾಜ್ @ ರಿಯಾಜುದ್ದೀನ್, ಪ್ರಾಯ 36 ವರ್ಷ, ಲಾಯಿಲ ಬೆಳ್ತಂಗಡಿ.
13] ಮೊಹಮ್ಮದ್, ಪ್ರಾಯ 54 ವರ್ಷ, ಪಡಂಗಡಿ ಬೆಳ್ತಂಗಡಿ.
14] ಅಬೂಬಕ್ಕರ್ @ ಗುಜುರಿ ಅಬೂಬಕ್ಕರ್, ಪ್ರಾಯ 45 ವರ್ಷ, ಕುವೆಟ್ಟು ಬೆಳ್ತಂಗಡಿ
15] ಅಬ್ದುಲ್ ರವೂಫ್, ಪ್ರಾಯ 35 ವರ್ಷ, ಲಾಯಿಲ ಬಂಟ್ವಾಳ.
16] ಮುಸ್ತಾಫ, ಪ್ರಾಯ 48 ವರ್ಷ,ಲಾಯಿಲ ಬೆಳ್ತಂಗಡಿ
17] ಎಂ.ಅಶ್ರಫ್, ಪ್ರಾಯ 47 ವರ್ಷ, ಕಾವಳಪಡೂರು ಬಂಟ್ವಾಳ.
18] ರಮೇಶ್.ಕೆ, ಪ್ರಾಯ 38 ವರ್ಷ, ಬಜತ್ತೂರು ಪುತ್ತೂರು
19] ಅಬ್ದುಲ್ ರಝಾಕ್, ಪ್ರಾಯ 43 ವರ್ಷ,ಪಡಂಗಡಿ ಬೆಳ್ತಂಗಡಿ.
20] ಕಮಲಾಕ್ಷ ದಾಸ್, ಪ್ರಾಯ 50 ವರ್ಷ, ಮಾಲಾಡಿ ಬೆಳ್ತಂಗಡಿ
21] ವಿಜಯ ಕುಮಾರ್, ಪ್ರಾಯ 35 ವರ್ಷ, ಪಡಂಗಡಿ ಬೆಳ್ತಂಗಡಿ
22] ಮಜೀದ್ ಯಾನೆ ಅಬ್ದುಲ್ ಮಜೀದ್, ಪ್ರಾಯ 34 ವರ್ಷ, ಕುವೆಟ್ಟು ಬೆಳ್ತಂಗಡಿ
23] ಶ್ರೀಧರ ಪೂಜಾರಿ, ಪ್ರಾಯ 59 ವರ್ಷ, ಪೆರ್ನೆ ಬಂಟ್ವಾಳ
24] ಮುನ್ನ @ ಮುಸ್ತಾಫ, ಪ್ರಾಯ 48 ವರ್ಷ,ನಾವುರ ಬಂಟ್ವಾಳ.