Sunday, June 7, 2026
Homeಕರಾವಳಿಉಡುಪಿಕಾಪು ಬೀಚ್ ನಲ್ಲಿ ನೀರುಪಾಲಾದ ಬೆಂಗಳೂರಿನ ಇಬ್ಬರು ಯುವಕರು: ಓರ್ವನ ಮೃತದೇಹ ಪತ್ತೆ

ಕಾಪು ಬೀಚ್ ನಲ್ಲಿ ನೀರುಪಾಲಾದ ಬೆಂಗಳೂರಿನ ಇಬ್ಬರು ಯುವಕರು: ಓರ್ವನ ಮೃತದೇಹ ಪತ್ತೆ

- Advertisement -
- Advertisement -

ಉಡುಪಿ: ಬೆಂಗಳೂರಿನಿಂದ ಬಂದ ಐವರು ಯುವಕರ ತಂಡದಲ್ಲಿ ಇಬ್ಬರು ಯುವಕರು ಕಾಪು ಬೀಚ್ ನಲ್ಲಿ ನಿರುಪಾಲಾದ ಘಟನೆ ಇಂದು ಸಂಜೆ ನಡೆದಿದೆ. ಕಾರ್ತಿಕ್ ಮತ್ತು ರೂಪೇಶ್ ಎಂಬವರು ನೀರು ಪಾಲಾಗಿದ್ದು, ರೂಪೇಶ್ ಎಂಬಾತನ ಶವ ಮೇಲಕ್ಕೆತ್ತಲಾಗಿದೆ. ನೀರಿನಲ್ಲಿ ಮುಳುಗಿದ ಕಾರ್ತಿಕ್ ಗಾಗಿ ಶೋಧ ಕಾರ್ಯ ಮುಂದುವರಿದಿದೆ.

ನೀರು ಪಾಲಾಗುತ್ತಿದ್ದ ರೂಪೇಶ್ ನನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ, ವಿನೀತ್, ಪ್ರಥಮ್, ದಮೋದರ ಪುತ್ರನ್, ಚಂದ್ರಹಾಸ ಜೊತೆಗೂಡಿ ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಮೇಲಕ್ಕೆ ತಂದು ಆಕ್ಸಿಜನ್ ನೀಡಲಾಯಿತಾದರೂ ಅಷ್ಟರಲ್ಲೇ ರೂಪೇಶ್ ಮೃತಪಟ್ಟಿದ್ದರು ಎನ್ನಲಾಗಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!