Sunday, June 7, 2026
Homeತಾಜಾ ಸುದ್ದಿಕ್ರೀಡಾ ಇಲಾಖೆಯಿಂದ ತಾಲೂಕು ಮಟ್ಟದ 176 ಕೋಚ್ ಹುದ್ದೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ

ಕ್ರೀಡಾ ಇಲಾಖೆಯಿಂದ ತಾಲೂಕು ಮಟ್ಟದ 176 ಕೋಚ್ ಹುದ್ದೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ

- Advertisement -
- Advertisement -

ಬೆಂಗಳೂರು: ಕ್ರೀಡಾ ಇಲಾಖೆಯಲ್ಲಿ 176 ಕ್ರೀಡಾ ಕೋಚ್‌ಗಳ ಹುದ್ದೆಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ.ತಾಲೂಕು ಮಟ್ಟದ 176 ಕೋಚ್ ಹುದ್ದೆಗಳನ್ನು ಮಂಜೂರು ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಿದ್ದು, ಪ್ರತಿ ತಾಲೂಕಿಗೆ ಒಬ್ಬರಂತೆ 235 ಕೋಚ್‌ ಹುದ್ದೆಗಳ ಸೃಜನೆಗೆ ಹಣಕಾಸು ಇಲಾಖೆಗೆ ಕ್ರೀಡಾ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು.

ಹಳೆಯ ತಾಲೂಕುಗಳನ್ನು ಪರಿಗಣಿಸಿ 176 ಕೋಚ್ ಕಂ ಸಂಯೋಜಕರ ಹುದ್ದೆಗಳನ್ನು ಆರ್ಥಿಕ ಇಲಾಖೆ ಮಂಜೂರು ಮಾಡಿದ್ದು, ಕ್ರೀಡಾ ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ ತಾಲೂಕು ಮಟ್ಟದ ಹುದ್ದೆಗಳನ್ನು ಸೃಷ್ಟಿಸಲಾಗಿದೆ.ಶೀಘ್ರದಲ್ಲೇ ಮಂಜೂರಾಗಿರುವ ಕೋಚ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.

- Advertisement -

Latest News

error: Content is protected !!