Wednesday, June 3, 2026
Homeಕ್ರೀಡೆಧೋನಿ ಮಗಳಿಗೆ ಬೆದರಿಕೆ ಪ್ರಕರಣ: ಪೊಲೀಸರಿಂದ 16 ವರ್ಷದ ಬಾಲಕನ ಬಂಧನ

ಧೋನಿ ಮಗಳಿಗೆ ಬೆದರಿಕೆ ಪ್ರಕರಣ: ಪೊಲೀಸರಿಂದ 16 ವರ್ಷದ ಬಾಲಕನ ಬಂಧನ

- Advertisement -
- Advertisement -

ಅಹಮದಾಬಾದ್: ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮಗಳಿಗೆ ವಿಕೃತ ವ್ಯಕ್ತಿಯೊಬ್ಬ ಅತ್ಯಾಚಾರದ ಬೆದರಿಕೆ ಹಾಕಿದ್ದ. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಜರಾತ್ ಪೊಲೀಸರು 16 ವರ್ಷದ ಬಾಲಕನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯು ಇನ್ಸ್ಟಾಗ್ರಾಂ ಮೂಲಕ ಧೋನಿ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ. ಈ ಸಂಬಂಧ ಧೋನಿ ಪತ್ನಿ ಸಾಕ್ಷಿ ಸಿಂಗ್ ರಾಂಚಿ ಪೊಲೀಸರಿಗೆ ದೂರು ನೀಡಿದ್ದರು. ಬೆದರಿಕೆ ಹಾಕಿರುವ ಬಾಲಕ ಸೆಕೆಂಡ್ ಪಿಯುಸಿ ಓದುತ್ತಿದ್ದು, ಕಛ್ ಸಮೀಪದ ಮುಂದ್ರಾ ಗ್ರಾಮದ ನಿವಾಸಿ ಎಂದು ಪೊಲೀಸರು ಹೇಳಿದ್ದಾರೆ.

ರಾಂಚಿ ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸಿ ಆರೋಪಿಯ ಬಗ್ಗೆ ಗುಜರಾತ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಛ್ ಪೊಲೀಸರು ಆರೋಪಿಯನ್ನು ಭಾನುವಾರ ರಾತ್ರಿ ಬಂಧಿಸಿದ್ದಾರೆ.ಬಂಧಿತ ಬಾಲಕ ಬೆದರಿಕೆ ಹಾಕಿರುವ ಬಗ್ಗೆ ತಪ್ಪು ಒಪ್ಪಿಕೊಂಡಿದ್ದು ಅವನನ್ನು ರಾಂಚಿ ಪೊಲೀಸರ ವಶಕ್ಕೆ ಒಪ್ಪಿಸಲಾಗುವುದು ಎಂದು ಗುಜರಾತ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋತ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಲಾಗಿತ್ತು. ಈ ಮೊದಲು ಆಟಗಾರರ ಪತ್ನಿಯರು ಅಥವಾ ಗೆಳತಿಯರಿಗೆ ಟ್ರೋಲ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಲಾಗುತ್ತಿತ್ತು. ಆದರೆ, ಈಗ ಧೋನಿಯವರ ಐದು ವರ್ಷದ ಮಗಳಿಗೆ ಬೆದರಿಕೆ ಹಾಕಿದ್ದು ಮೃಗೀಯ ವರ್ತನೆಗಿಂತಲೂ ಕೀಳಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

- Advertisement -

Latest News

error: Content is protected !!