Thursday, June 4, 2026
Homeತಾಜಾ ಸುದ್ದಿಸಿಕ್ಕಿಂನಲ್ಲಿ ಭೀಕರ ಅಪಘಾತದಲ್ಲಿ 16 ಭಾರತೀಯ ಯೋಧರು ಹುತಾತ್ಮ

ಸಿಕ್ಕಿಂನಲ್ಲಿ ಭೀಕರ ಅಪಘಾತದಲ್ಲಿ 16 ಭಾರತೀಯ ಯೋಧರು ಹುತಾತ್ಮ

- Advertisement -
- Advertisement -

ಸಿಕ್ಕಿಂ:ಇಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 16 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಸೇನಾ ಟ್ರಕ್ ಸಿಕ್ಕಿಂನಲ್ಲಿ ಕಮರಿಗೆ ಬಿದ್ದು ಮೂವರು ಅಧಿಕಾರಿಗಳು ಸೇರಿದಂತೆ 16 ಸೈನಿಕರು ಹುತಾತ್ಮರಾಗಿದ್ದಾರೆ.

ಬೆಳಿಗ್ಗೆ ಚಾಟೆನ್‌ನಿಂದ ಥಾಂಗು ಕಡೆಗೆ ಹೋಗುವ ಮಾರ್ಗದಲ್ಲಿ, ವಾಹನವು ತೀಕ್ಷ್ಣವಾದ ತಿರುವಿನಲ್ಲಿ ಕಡಿದಾದ ಇಳಿಜಾರಿನಲ್ಲಿ ಸೇನಾ ವಾಹನ ಬಿದ್ದ ಪರಿಣಾಮ  16 ಯೋಧರು ಹುತಾತ್ಮರಾಗಿದ್ದಾರೆ.ಇನ್ನು ಈ ಬಗ್ಗೆ ಟ್ವೀಟ್ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೈನಿಕರ ಬದ್ಧತೆಗೆ ದೇಶವೇ ಕೃತಜ್ಞವಾಗಿದೆ. ಅವರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!