Monday, May 20, 2024
Homeಕರಾವಳಿಸುಳ್ಯ: ಜಿ.ಪಂ ಸದಸ್ಯೆ ಮೇಲೆ ಹಲ್ಲೆ ಪ್ರಕರಣ: ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸಹಿತ 14...

ಸುಳ್ಯ: ಜಿ.ಪಂ ಸದಸ್ಯೆ ಮೇಲೆ ಹಲ್ಲೆ ಪ್ರಕರಣ: ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸಹಿತ 14 ಮಂದಿಗೆ ಜೈಲು ಶಿಕ್ಷೆ!

spot_img
- Advertisement -
- Advertisement -

ಸುಳ್ಯ: 2014ರ ಜಿ.ಪಂ ಸದಸ್ಯೆ ಸರಸ್ವತಿ ಕಾಮತ್ ಮೇಲೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಲ್ಲೆ ಹಾಗೂ ಮಾನಭಂಗಕ್ಕೆ ಯತ್ನಿಸಿದ ಪ್ರಕರಣದ ಆರೋಪಿಗಳಾದ ದ.ಕ.ಜಿ.ಪಂ ಹಾಲಿ ಸದಸ್ಯ ಹಾಗೂ ಬಿಜೆಪಿ ಸುಳ್ಯ ತಾಲೂಕು ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು 14 ಮಂದಿಗೆ ಜೈಲು ಶಿಕ್ಷೆ ವಿಧಿಸುವಂತೆ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ.

ಈ ಬಗ್ಗೆ ಜೆ.ಎಂ.ಎಫ್.ಸಿ. ನ್ಯಾಯಾಲಯ ಸೋಮವಾರ ಸಂಜೆ ತೀರ್ಪು ಪ್ರಕಟಿಸಿದೆ. ಸುಳ್ಯ ಜೆ.ಎಂ.ಎಫ್.ಸಿ. ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ., ಆರೋಪಿಗಳ ವಿರುದ್ಧದ ಪ್ರಕರಣ ಸೆ.149, 147\149, 341,506, 504, 323, 354 ಸೆಕ್ಷನ್ ಗಳ ಅಡಿಯಲ್ಲಿ ಸಾಬೀತಾಗಿದ್ದು ಇದೆಲ್ಲವನ್ನೂ ಸಂಕ್ಷಿಪ್ತಗೊಳಿಸಿ 14 ಮಂದಿಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ 1. 12 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

2014ರ ಲೋಕಸಭಾ ಚುನಾವಣೆಯ ಸಂದರ್ಭ ಅಂದು ಜಿ.ಪಂ ಸದಸ್ಯೆಯಾಗಿದ್ದ ಸರಸ್ವತಿ ಕಾಮತ್ ಅವರು ನೆಲ್ಲೂರು ಕೆಮ್ರಾಜೆಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ಬಿಜೆಪಿ ಹರೀಶ್ ಕಂಜಿಪಿಲಿ ಮತ್ತು ಹರೀಶ್, ಈಶ್ವರಪ್ಪ ಗೌಡ, ರವಿಚಂದ್ರ, ಸವಿನ್ ಕೆ.ಬಿ., ದಿವಾಕರ ನಾಯಕ್, ದಿನೇಶ್ ಚೆಮ್ನೂರು, ರಾಮಚಂದ್ರ ಹರ್ಲಡ್ಕ, ಷಣ್ಮುಖ, ಧನಂಜಯ, ಬಾಲಕೃಷ್ಣ ಕಂಜಿಪಿಲಿ, ಮನೋಹರ್, ದೀಪಕ್ ಎಲಿಮಲೆ, ಮನೋಜ್ ಎಂ.ಕೆ., ವಿಕಾಸ್ ಯಾನೆ ವಿಶ್ವನಾಥ ಎಂಬವರನ್ನೊಳಗೊಂಡ 14 ಮಂದಿಯ ಗುಂಪು ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಮಾನಭಂಗಕ್ಕೆ ಯತ್ನಿಸಿದ ಆರೋಪ ಎದುರಿಸುತ್ತಿದ್ದರು. ಈ ಬಗ್ಗೆ ಸರಸ್ವತಿ ಕಾಮತ್ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಗಿನ ದ.ಕ. ಜಿಲ್ಲಾ ಎಸ್ಪಿ ರವಿ ಬಿ.ಎಸ್. ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಲ್ಲದೆ ಎಲ್ಲಾ ಹದಿನೈದು ಮಂದಿ ಆರೋಪಿಗಳು ತಲಾ ರೂ. 3750 ರಂತೆ ಪಾವಾತಿಸಿ 50 ಸಾವಿರ ರೂ. ಪರಿಹಾರವನ್ನು ದೂರುದಾರ ಮಹಿಳೆಗೆ ನೀಡಬೇಕೆಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಆದೇಶಿಸಿದ್ದಾರೆ ಒಟ್ಟು 15 ಸಾಕ್ಷಿಗಳಲ್ಲಿ 13 ಮಂದಿ ಪ್ರಾಸಿಕ್ಯೂಶನ್ ಪರ ಸಾಕ್ಷಿ ನುಡಿದಿದ್ದಾರೆಂದು ಎ.ಪಿ.ಪಿ. ಜನಾರ್ದನ ಬಿ.ಯವರು ತಿಳಿಸಿದ್ದಾರೆ.

ತೀರ್ಪು ಘೋಷಣೆಯಾದ ಬಳಿಕ ಆರೋಪಿಗಳ ಪರ ವಕೀಲರು ತೀರ್ಪನ್ನು ಮೇಲಿನ ಕೋರ್ಟ್ ನಲ್ಲಿ ಪ್ರಶ್ನಿಸಲು ಒಂದು ತಿಂಗಳ ಕಾಲಾವಕಾಶ ಹಾಗೂ ಜಾಮೀನು ನೀಡಬೇಕೆಂದೂ ಕೇಳಿರುವುದಾಗಿಯೂ ಅದಕ್ಕೆ ನ್ಯಾಯಾಧೀಶರು ಒಪ್ಪಿಗೆ ಸೂಚಿಸಿರುವುದಾಗಿಯೂ ತಿಳಿದು ಬಂದಿದೆ.

- Advertisement -
spot_img

Latest News

error: Content is protected !!