Friday, May 3, 2024
Homeಅಪರಾಧ13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!

13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!

spot_img
- Advertisement -
- Advertisement -

ಕೋಟ: 13 ರಾಜ್ಯಗಳಲ್ಲಿ ಹಲವಾರು ಕಳ್ಳತನ ಆರೋಪಗಳನ್ನು ಎದುರಿಸುತ್ತಿರುವ ಆರೋಪಿಯು ಇತ್ತೀಚೆಗೆ ಕೇರಳದಿಂದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿ ಬಿಹಾರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಕೋಟ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಹಾರ ಮೂಲದ ಆರೋಪಿ ಮಹಮ್ಮದ್‌ ಇರ್ಫಾನ್‌ನನ್ನು ಬ್ರಹ್ಮಾವರ ತಾಲೂಕು ಕೋಟ ಮೂರ್ಕೈಯಲ್ಲಿ ಶ‌ನಿವಾರ ರಾತ್ರಿ ಕೋಟ ಪೊಲೀಸರು ಬಂಧಿಸಿ ಕೋಟ್ಯಂತರ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ 13 ರಾಜ್ಯಗಳಲ್ಲಿ ಹಲವಾರು ಕಳ್ಳತನ ಆರೋಪಗಳಿವೆ ಎನ್ನುವುದರ ಜತೆಗೆ ಹಲವಾರು ಕುತೂಹಲಕಾರಿ ವಿಷಯಗಳು ಹೊರಬಿದ್ದಿವೆ.

ಈತ ಈಗಾಗಲೇ ಹಲವು ಬಾರಿ ಪೊಲೀಸರ ಅತಿಥಿಯಾಗಿದ್ದ. ಸಿನೆಮಾ ನಟರು, ರಾಜಕಾರಣಿಗಳು, ಗುತ್ತಿಗೆದಾರರ ಸೇರಿದಂತೆ ಅತ್ಯಂತ ಶ್ರೀಮಂತರ ಮನೆಗಳನ್ನೇ ಹೊಂಚುಹಾಕಿ ಕಳ್ಳತನ ಮಾಡುತ್ತಿದ್ದ, ಒಮ್ಮೆ ಕಣ್ಣಿಟ್ಟರೆ ಎಷ್ಟೇ ದಿನವಾದರು ಕಾದು ತನ್ನ ಕೈಚಳಕ ತೋರುತ್ತಿದ್ದ, ಹೆಚ್ಚಿನ ಬಾರಿ ಓರ್ವನೇ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದ ಹಾಗೂ ಪ್ರತಿ ಬಾರಿಯೂ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣಗಳನ್ನೇ ಲಪಟಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.

ಪೊಲೀಸರೇ ಶಾಕ್‌ !; ಪೊಲೀಸರು ಈತನ ವಿಚಾರಣೆ ಗಿಳಿದಾಗ ನನ್ನ ಬಗ್ಗೆ ಮಾಹಿತಿ ಬೇಕಾದರೆ ಯೂಟ್ಯೂಬ್‌ನಲ್ಲಿ ಮಹಮ್ಮದ್‌ ಇರ್ಫಾನ್‌ರೋಬಿನ್‌ಹುಡ್‌ ಎಂದು ಸರ್ಚ್‌ ಮಾಡಿ ಎಂದಿದ್ದನಂತೆ. ಯೂಟ್ಯೂಬ್‌ನಲ್ಲಿ ಸರ್ಚ್‌ ಮಾಡಿದಾಗ ಈತನ ಬಗ್ಗೆ ಇರುವ ಹತ್ತಾರು ವೀಡಿಯೋಗಳಿದ್ದು ಅದರಲ್ಲಿ ಕಳ್ಳತನ ಹಾಗೂ ಕೋಟ್ಯಂತರ ರೂ. ಮೊತ್ತವನ್ನು ಜನರಿಗೆ ಹಂಚುವ ಕುರಿತು ವಿಚಾರಗಳಿವೆ. ಅವೆಲ್ಲವನ್ನು ನೋಡಿದ ಪೊಲೀಸರಿಗೆ ಆಶ್ಚರ್ಯವಾಗಿದೆ.

- Advertisement -
spot_img

Latest News

error: Content is protected !!