Monday, May 20, 2024
Homeಕರಾವಳಿದ.ಕ ಜಿಲ್ಲೆಯಲ್ಲಿ ಕಡಲಾಮೆಗಳ ಸಂತಾನೋತ್ಪತ್ತಿ ತಾಣ 12 ಕಡೆ ಪತ್ತೆ

ದ.ಕ ಜಿಲ್ಲೆಯಲ್ಲಿ ಕಡಲಾಮೆಗಳ ಸಂತಾನೋತ್ಪತ್ತಿ ತಾಣ 12 ಕಡೆ ಪತ್ತೆ

spot_img
- Advertisement -
- Advertisement -

ಮಂಗಳೂರು: 1985ರ ಬಳಿಕ ಇದೇ ಮೊದಲ ಬಾರಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿ 1ರಡಿ ರಕ್ಷಣೆ ಪಡೆದಿರುವ ಕಡಲಾಮೆಗಳ ಸಂತಾನೋತ್ಪತ್ತಿ ಚಟುವಟಿಕೆಯು ದಕ್ಷಿಣ ಕನ್ನಡ ಜಿಲ್ಲೆಯ ಕಡಲ ಕಿನಾರೆಯಲ್ಲಿ ಕಂಡುಬಂದಿದೆ. ಜಿಲ್ಲೆಯ 12 ಕಡೆ ಈ ಆಮೆಗಳು ಮೊಟ್ಟೆ ಇಡುವ ಜಾಗಗಳನ್ನು ಅರಣ್ಯ ಇಲಾಖೆ ಪತ್ತೆಹಚ್ಚಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಅವರು ತಣ್ಣೀರುಬಾವಿ ಬಳಿ ಕಡಲಾಮೆ (ಅಲಿವ್ ರಿಡ್ಲೆ) ಅಮೆಗಳ ಸಂತಾನೋತ್ಪತ್ತಿ ತಾಣಕ್ಕೆ ಭೇಟಿ ನೀಡಿ ಪರಿಶೀಲಿಸಿ, ‘ಕಡಲಾಮೆಗಳ ಸಂರಕ್ಷಣೆಗೆ ಕ್ರಮವಹಿಸಬೇಕು. ಮೊಟ್ಟೆಯೊಡೆದು ಹೊರಬರುವ ಆಮೆ ಮರಿಗಳು ಸುರಕ್ಷಿತವಾಗಿ ಕಡಲ ಒಡಲನ್ನು ಸೇರುವಾಗ ಅಡ್ಡಿ ಆತಂಕ ಎದುರಾಗದಂತೆ ವ್ಯವಸ್ಥೆ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇನ್ನು ಮೀನುಗಾರರಾದ ಆನಂದ ಕೋಟ್ಯಾನ್ ಮತ್ತು ವಾಸು ಕೊಟ್ಯಾನ್‌ ಕಡಲಾಮೆಗಳ ಸಂತಾನೋತ್ಪತ್ತಿ ತಾಣಗಳ ಪತ್ತೆ ಹಾಗೂ ಸಂರಕ್ಷಣಾ ಕಾರ್ಯಕ್ಕೆ ನೆರವಾಗಿದ್ದು, ಅವರಿಗೆ ಸಚಿವರು ತಲಾ 15 ಸಾವಿರ ಬಹುಮಾನ ವಿತರಿಸಿದರು.

“ಅರಣ್ಯ ಇಲಾಖೆಯು ಸಸಿಹಿತ್ತು, ಇಡ್ಯಾ, ಬೆಂಗರೆ, ತಣ್ಣೀರುಬಾವಿ ಹಾಗೂ ಸೋಮೇಶ್ವರದಲ್ಲಿ ಕಡಲಾಮೆಗಳ ಪತ್ತೆ ಹಾಗೂ ಅವುಗಳ ಚಟುವಟಿಕೆ ದಾಖಲೀಕರಣಕ್ಕೆ ಕಿನಾರೆಗಳಲ್ಲಿ ಶಿಬಿರಗಳನ್ನು ಆರಂಭಿಸಿದೆ. ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ರಕ್ಷಕರ ಮಾರ್ಗದರ್ಶನದಲ್ಲಿ ಮೂರು ಅಥವಾ ನಾಲ್ವರು ವೀಕ್ಷಕರು ಕಡಲಾಮೆಗಳು ಕಿನಾರೆಗೆ ಬಂದು ಗೂಡು ಕಟ್ಟಿ ಸಂತಾನೋತ್ಪಾದನೆ ಮಾಡುವ ಪ್ರಕ್ರಿಯೆಯನ್ನು ಮುಸ್ಸಂಜೆಯಿಂದ ಮುಂಜಾನೆವರೆಗೆ ಪರಿವೀಕ್ಷಿಸಿ ದಾಖಲೀಕರಿಸುತ್ತಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ‘ಕಡಲಾಮೆಗಳು ಮೊಟ್ಟೆ ಇಟ್ಟ ಜಾಗದಲ್ಲೇ ಅವುಗಳಿಗೆ ರಕ್ಷಣೆ ಒದಗಿಸಲು ಹಾಗೂ ಬೇಟೆಯಾಡುವ ಪ್ರಾಣಿ ಅಥವಾ ಪಕ್ಷಿಗಳಿಗೆ ಅವು ಬಲಿಯಾಗುವುದನ್ನು ತಡೆಗಟ್ಟಲು ಕ್ರಮಕೈಗೊಂಡಿದ್ದೇವೆ. ಸೋಮೇಶ್ವರದಿಂದ ಸಸಿಹಿಷ್ಣುವಿನ ವರೆಗಿನ ಕಿನಾರೆಯಲ್ಲಿ ಕಡಲಾಮೆಗಳ ರಕ್ಷಣೆಯ ಅಗತ್ಯದ ಕುರಿತು ಮೀನುಗಾರ ಸಮುದಾಯಗಳಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

- Advertisement -
spot_img

Latest News

error: Content is protected !!